ಪ್ರಜಾಸ್ತ್ರ ಸುದ್ದಿ
ಮೌಗಂಜ್(Mauganj): ಚಲಿಸುತ್ತಿದ್ದ 108 ಆ್ಯಂಬುಲೆನ್ಸ್ ನಲ್ಲಿ(Ambulance) 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದಿದೆ. ಕೃತ್ಯ ಎಸಗಿದ ಹಾಗೂ ಅದಕ್ಕೆ ಸಹಕರಿಸಿದ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ನವೆಂಬರ್ 22ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶಾನಸಾನ್ ಎನ್ನುವ ಹಳ್ಳಿಯ ಹತ್ತಿರ ಬಾಲಕಿ ಹಾಗೂ ಆಕೆಯ ಸಂಬಂಧಿ ಬಾಲಕ 108 ಆ್ಯಂಬುಲೆನ್ಸ್ ನಲ್ಲಿ ಹತ್ತಿದ್ದಾರೆ. ಸ್ವಲ್ಪ ದೂರ ಹೋದ ಮೇಲೆ ಬಾಲಕಿ ಸಂಬಂಧಿ ನೀರು ತರುವ ನೆಪದಲ್ಲಿ ಮಾರ್ಗಮಧ್ಯೆ ಇಳಿದಿದ್ದಾನೆ. ಮುಂದೆ ಗಾಡಿ ಚಲಿಸುತ್ತಿರುವಾಗಲೇ ರಾಕೇಶ್ ಕೇವಾತ್ ಎಂಬಾತ(Minor Girl Raped) ಅತ್ಯಾಚಾರವೆಸಗಿದ್ದಾನೆ. ನಂತರ ಗ್ರಾಮದ ನರ್ಜನ ಪ್ರದೇಶದಲ್ಲಿ ಬಾಲಕಿಯನ್ನು ಎಸೆದು ಹೋಗಿದ್ದಾರೆ. ಘಟನೆಯಿಂದ ಹೆದರಿಂದ ಬಾಲಕಿ ಏನೂ ಹೇಳಿರಲಿಲ್ಲವಂತೆ. ಮುಂದೆ ಈ ಬಗ್ಗೆ ತಿಳಿದಿದ್ದು, ನವೆಂಬರ್ 25ರಂದು ದೂರು ದಾಖಲಿಸಲಾಗಿದೆ.
ಈ ಘಟನೆ ಸಂಬಂಧ ರಾಕೇಶ್ ಕೇವಾಲ್, ಬಾಲಕಿ ಸಂಬಂಧಿ ಹಾಗೂ ಇದಕ್ಕೆ ಸಹಕಾರ ನೀಡಿದ ಮೂವರು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಪೋಕ್ಸೋ ಹಾಗೂ ಭಾರತೀಯ ದಂಡ ಸಂಹಿತೆ(BNS) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿದು ಬಂದಿದೆ.