ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್(Hyderabad) : ನಾಂಪಲ್ಲಿ ಎಂಬಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಈ ವೇಳೆ ಇಬ್ಬರು ಮಕ್ಕಳು, ಓರ್ವ ಮಹಿಳೆ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಪೀಠೋಪಕರಣ ಮಳಿಗೆಯಲ್ಲಿ ಇಂತಹದೊಂದು ಅವಗಡ ಸಂಭವಿಸಿದೆ. ಕಟ್ಟಡದ ನೆಲಮಾಳಿಗೆಯಿಂದ ಮೃತದೇಹಗಳನ್ನು ಹೊರಗೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಕಾರಣ ಏನು ಅನ್ನೋದು ಇದುವರೆಗೂ ತಿಳಿದು ಬಂದಿಲ್ಲ. ತನಿಖಾ ಹಂತದಲ್ಲಿದೆ ಅಂತಾ ಅಧಿಕಾರಿಗಳು ಹೇಳಿದ್ದಾರೆ. ಮಳಿಗೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನೆಲಮಾಳಿಗೆಯಲ್ಲಿ ಪೀಠೋಪಕರಣಗಳು, ರಾಸಾಯನಿಕ ವಸ್ತುಗಳು, ಫೋಮ್, ಪ್ಲಾಸ್ಟಿಕ್ ವಸ್ತುಗಳು ಸೇರಿ ಇತರೆ ವಸ್ತುಗಳು ಇದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.




