ಪ್ರಜಾಸ್ತ್ರ ಸುದ್ದಿ
ದಿಸ್ಪುರ್(Dispur): ಪೋಕ್ಸೋ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ(Prisoners) ಐವರು ಲುಂಗಿ, ಬೆಡ್ ಶೀಟ್ ಬಳಸಿಕೊಂಡು 20 ಅಡಿ ಎತ್ತರದ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿರುವ ಘಟನೆ ಆಸ್ಸಾಂನಲ್ಲಿ(Assam) ಶುಕ್ರವಾರ ತಡರಾತ್ರಿ ನಡೆದಿದೆ. ಜಿಲ್ಲಾ ಕಾರಾಗೃಹದಿಂದ ಐವರು ಪರಾರಿಯಾಗಿದ್ದು, ಪೊಲೀಸರು ಅವರ ಪತ್ತೆಗೆ ಮುಂದಾಗಿದ್ದಾರೆ.
ಅಬ್ದುಲ್ ರಶೀದ್, ಸೈಫುದ್ದೀನ್, ನೂರ್ ಇಸ್ಲಾಂ, ಜಿಯಾರುಲ್ ಇಸ್ಲಾಂ ಹಾಗೂ ಮಫಿದುಲ್ ಪರಾರಿಯಾದ(Escape) ವಿಚಾರಣಾಧೀನ ಕೈದಿಗಳಾಗಿದ್ದಾರೆ. ಮೊದಲು ಬ್ಯಾರಕ್ ರಾಡ್ ಗಳನ್ನು ಮುರಿದಿದ್ದಾರೆ. ನಂತರ 20 ಅಡಿ ಎತ್ತರದ ಕಾಂಪೌಂಡ್ ಹಾರಲು ಲುಂಬಿ ಬೆಡ್ ಶೀಟ್ ಬಳಕೆ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಮಾಡುತ್ತಿದ್ದರೂ ರಾತ್ರಿ ಪಾಳೆಯದಲ್ಲಿ ಸಿಬ್ಬಂದಿ ಇರಲಿಲ್ಲವೇ? ಸಿಸಿಟಿವಿಯಲ್ಲಿ ಇದ್ಯಾವುದನ್ನು ಪರಿಶೀಲನೆ ಮಾಡುತ್ತಿರಲಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ.