ಪ್ರಜಾಸ್ತ್ರ ಸುದ್ದಿ
ಶಿಮ್ಲಾ(Shimla): ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿ ಸೇತುವೆಯೊಂದು ದಿಢೀರ್ ಕೊಚ್ಚಿಕೊಂಡು ಹೋದ ಘಟನೆ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಕನಾನ್ ಗ್ರಾಮದಲ್ಲಿ ನಡೆದಿದೆ. ಸೇತುವೆ ಜೊತೆಗೆ ಮೂರು ಅಂಗಡಿಗಳು ಸಹ ಕೊಚ್ಚಿಕೊಂಡು ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕಳೆದ ರಾತ್ರಿ ರಾಮಚಂದ್ರ ಚೌಕ್ ಬಳಿ ಭೂಕುಸಿತವಾಗಿದೆ. 40ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಕುಲ್ಲು ಹಾಗೂ ಬಂಜರ್ ಪ್ರದೇಶದಲ್ಲಿ ಪ್ರವಾಹ ಹಾಗೂ ಭೂಕುಸಿತ ಉಂಟಾಗಿವೆ. ಜೂನ್ 20 ರಿಂದ ಶುರುವಾದ ಮುಂಗಾರು ಮಳೆಯಿಂದ ಇಲ್ಲಿಯ ತನಕ 74 ದಿಢೀರ್ ಪ್ರವಾಹಗಳು, 70 ಭೂಕುಸಿತಗಳು ಆಗಿವೆ. ಬರೋಬ್ಬರಿ 140 ಮಂದಿ ಸಾವನ್ನಪ್ಪಿದ್ದಾರೆ. 37 ಜನರು ನಾಪತ್ತೆಯಾಗಿದ್ದಾರೆ. ಇಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.