ಪ್ರಜಾಸ್ತ್ರ ಸುದ್ದಿ
ಕಠ್ಮಂಡು(Kathmandu): ನೆರೆಯ ದೇಶ ನೇಪಾಳದಲ್ಲಿ ಜಲಪ್ರಳಯ ಸೃಷ್ಟಿಯಾಗಿದೆ. ಅಪಾರ ಪ್ರಮಾಣದ(Rainfall) ಮಳೆಯಿಂದಾಗಿ ಪ್ರವಾಹ(Floods) ಉಂಟಾಗಿದ್ದು, ಇದುವರೆಗೂ 112 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಠ್ಮಂಡು ಕಣಿವೆಯಲ್ಲಿಯೇ 34 ಜನರು ಮೃತಪಟ್ಟಿದ್ದಾರೆ. 226 ಮನೆಗಳು ಮುಳುಗಡೆಯಾಗಿವೆ. 36 ಜನರು ಗಾಯಗೊಂಡಿದ್ದಾರೆ. ದೇಶದ ತುಂಬಾ 44 ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ದೇಶ್ಯಾದ್ಯಂತ 79 ಜನರು ನಾಪತ್ತೆಯಾಗಿದ್ದಾರೆ.
ಈಗಾಗ್ಲೇ ಸಾವಿರಾರು ಜನರನ್ನು ರಕ್ಷಿಸಲಾಗಿದೆ. ಪ್ರವಾಹ ಪೀಡಿತ ಸ್ಥಳಗಳಲ್ಲಿ 3 ಸಾವಿರ ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಹಂಗಾಮಿ ಪ್ರಧಾನಿ(PM) ಹಾಗೂ ನಗರಾಭಿವೃದ್ಧಿ ಸಚಿವ ಪ್ರಕಾಶ್ ಮಾನ್ ಸಿಂಗ್ ತುರ್ತು ಸಭೆ ಕರೆದಿದ್ದಾರೆ. ಮೂರು ದಿನಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪರೀಕ್ಷೆಗಳನ್ನು ಮುಂದೂಡಲಾಗಿದೆ. ನರಾಶ್ರಿತರಿಗೆ ನೆರವು ನೀಡಲು ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದರ ಕುರಿತು ಚರ್ಚಿಸಲಾಗಿದೆ.