ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ನಿಮಗಾಗಿ ನಾವು ಸಂಸ್ಥೆ ವತಿಯಿಂದ ಹೊದಿಕೆ ಜೀವಕೆ ಅನ್ನೋ ಯೋಜನೆಯ ಮೂಲಕ ನಗರದ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮುಖ್ಯ ರಸ್ತೆಗಳು ಮತ್ತು ವೃತ್ತಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ಆವರಣಗಳಲ್ಲಿರುವ ಜನರಿಗೆ ಹೊದಿಕೆ ನೀಡಲಾಯಿತು. ಕಳೆದ ಐದು ವರ್ಷಗಳಿಂದ ಈ ಸೇವೆಯನ್ನು ಮಾಡಿಕೊಂಡು ಬರಲಾಗುತ್ತಿದೆ.
ಈ ವೇಳೆ ಸಂಸ್ಥೆಯ ಅಧ್ಯಕ್ಷ ವಿನಯ್ ಅವರು ಮಾತನಾಡಿ, ಹೊದಿಕೆ ಜೀವಕೆ ಯೋಜನೆಯು ಡಿಸೆಂಬರ್ ತಿಂಗಳು ಪೂರ್ತಿ ನಡೆಯಲ್ಲಿದ್ದು, ಹಂತಹಂತವಾಗಿ ವಿತರಣೆ ಮಾಡಲಿದ್ದೇವೆ. ಮುಂದಿನ ವಾರದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ತಾಲೂಕುಗಳಲ್ಲಿ ವಿತರಣೆ ಮಾಡಲಿದ್ದೇವೆ ಎಂದು ತಿಳಿಸಿದರು. ಕಾರ್ಯದರ್ಶಿ ಮೆಹಬೂಬ್ ಭಾಷ ಅವರು ಮಾತನಾಡಿ, ನಿಮ್ಮ ಸುತ್ತಮುತ್ತ ಹೊದಿಕೆಗಳ ಅವಶ್ಯಕತೆ ಇರುವವರ ಮಾಹಿತಿ ನೀಡಿದರೆ ಅವರಿಗೆ ಹೊದಿಕೆಗಳನ್ನು ವಿತರಿಸುವ ಕೆಲಸ ಮಾಡುತ್ತೇವೆ ಎಂದರು. ಮಹಿಳಾ ಕಾರ್ಯದರ್ಶಿ ವನಿತಾ.ಎಂ ಮಾತನಾಡಿ, ಈ ಬಾರಿ ಹೊದಿಕೆಗಳ ಜೊತೆಗೆ ಆಶ್ರಮದ ಹಿರಿಯರಿಗೆ, ಅವಶ್ಯಕತೆ ಇರುವ ಹಿರಿಯ ನಾಗರಿಕರಿಗೆ ಸ್ವೇಟ್ಟರ್ ಗಳನ್ನೂ ಸಹ ವಿತರಣೆ ಮಾಡಲಿದ್ದೇವೆ. ಈ ಯೋಜನೆಗೆ ನೆರವಾಗ ಬಯಸುವವರು ತಪ್ಪದೇ ಸಂಸ್ಥೆಯ ಮೊಬೈಲ್ 9448584400 ಸಂಖ್ಯೆಗೆ ಸಂಪರ್ಕಿಸಿ ಎಂದು ತಿಳಿಸಿದರು.
ಹೊದಿಕೆ ವಿತರಣೆಯಲ್ಲಿ ಹ್ಯಾಲಿಸ್ ಬ್ಲೂ ಕಂಪನಿಯ ವೀರನಗೌಡ, ಪ್ರವೀಣ, ವಿಷ್ಟುಪ್ರೀಯ. ನಿನಾ ಸಂಸ್ಥೆಯ ಬಾಲಸುಬ್ರಹ್ಮಣ್ಯ, ಶಿವಶಂಕರ, ವಸಂತ, ನವೀನ, ಬಾಲರಾಜ, ಅನಿಲ, ರಜತ, ಭಾಷ, ವಿನಯ, ಹರ್ಷವರ್ಧನ, ವೆಂಕಟೇಶ, ಹಸೇನ, ಚಿರಂಜೀವಿ, ವಿಶ್ವ,ನಾಗರಾಜ ಸೇರಿ ಇತರರು ಭಾಗವಹಿಸಿದ್ದರು.




