ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ನಟಿ, ರೂಪದರ್ಶಿಯಾಗಿದ್ದ ಮಮತಾ ಕುಲಕರ್ಣಿ ಇತ್ತೀಚೆಗೆ ಮುನ್ನಲೆಗೆ ಬಂದಿದ್ದು ಸಾಧ್ವಿಯಾಗಿರುವ ಕಾರಣಕ್ಕೆ. ಅದರಲ್ಲೂ ನಾಗಾ ಸಾಧುಗಳ ಮಹಾಂಡಲೇಶ್ವರ(Mandleshwar) ಕಿನ್ನಾರಾ ಅಖಾಡದ ಸಂಚಾಲಕಿಯಾಗಿದ್ದರು. ಇದು ವಿವಾದದ ಸ್ವರೂಪ ಪಡೆಯಿತು. ಇದೀಗ ಮಮತಾ ಕುಲಕರ್ಣಿ ಅಖಾಡ ತೊರೆದು ತಾವು ಸಾಧ್ವಿಯಾಗಿಯೇ ಇರುತ್ತೇನೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ.
ಕಿನ್ನಾರಾ ಅಖಾಡದಲ್ಲಿ ಮಮತಾಗೆ ಸ್ಥಾನ ನೀಡಿದ್ದಕ್ಕೆ ಮಹಾಂಡಲೇಶ್ವರ ಆಚಾರ್ಯ ಲಕ್ಷ್ಮಿ ನಾರಾಯಣ ತ್ರಿಪಾಠಿ ವಿರುದ್ಧ ವಿವಾದ ಶುರುವಾಗಿತ್ತು. ಯಾಮೈ ಮಮತಾ ನಂದಗಿರಿ ಹೆಸರಿನ ಮೂಲಕ ಅಖಾಡದಲ್ಲಿ ಗುರುತಿಸಿಕೊಂಡ ಮಮತಾ ಕುಲಕರ್ಣಿ ಮಹಾಕುಂಭ ಮೇಳದಲ್ಲಿ ಓಡಾಡಿಕೊಂಡಿದ್ದರು. ಈಗ ತಾವು ಮಹಾಂಡಲೇಶ್ವರ ಅಖಾಡದಿಂದ ಹೊರ ಬಂದಿದ್ದು, ಸಾಧ್ವಿಯಾಗಿಯೇ ಮುಂದುವರೆಯುವೆ ಎಂದಿದ್ದಾರೆ.
ಬಾಲಿವುಡ್ ನಟಿ, ರೂಪದರ್ಶಿಯಾಗಿದ್ದ 52 ವರ್ಷದ ಮಮತಾ(Mamta Kulkarni)ವಿಕಿ ಗೋಸ್ವಾಮಿ ಜೊತೆಗೆ ಮದುವೆಯಾಗಿದ್ದರು. ಹಲವು ವರ್ಷ ಆಫ್ರಿಕಾದಲ್ಲಿ ವಾಸವಾಗಿದ್ದರು. ಡ್ರಗ್ಸ್ ಪ್ರಕರಣವೊಂದರಲ್ಲಿ ಅಮೆರಿಕ ತನಿಖಾ ಸಂಸ್ಥೆಯ ತನಿಖೆಗೂ ಒಳಪಟ್ಟಿದ್ದರು. ಅಲ್ಲಿ ಚಿತ್ರರಂಗದಿಂದ ದೂರವೇ ಆಗಿದ್ದರು. ಈಗ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡಿದ್ದು ಸನ್ಯಾಸತ್ವ ಸ್ವೀಕರಿಸಿದ್ದಾರೆ.