ಪ್ರಜಾಸ್ತ್ರ ಸುದ್ದಿ
ಅಹಮದಾಬಾದ್(Ahmedabad): ಜೂನ್ 12ರಂದು ಗುಜರಾತಿನ ಅಹಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಸಾವನ್ನಪ್ಪಿದ್ದಾರೆ. ಇದೀಗ ಅವರ ಮೃತದೇಹ ಗುರುತು ಪತ್ತೆಯಾಗಿದೆಯಂತೆ. ಡಿಎನ್ಎ ಮೂಲಕ ಭಾನುವಾರ ವಿಜಯ್ ರೂಪಾನಿಯವರದ್ದು ಎಂದು ತಿಳಿದು ಬಂದಿದೆ ಎಂದು ಗೃಹ ಸಚಿವ ಹರ್ಷ ಸಾಂಘವಿ ತಿಳಿಸಿದ್ದಾರೆ.
ಇಂದು ಮುಂಜಾನೆ 11.10ರ ಸುಮಾರಿಗೆ ಅವರ ಡಿಎನ್ಎ ಹೊಂದಾಣಿಕೆಯಾಗಿರುವ ಬಗ್ಗೆ ತಿಳಿದು ಬಂದಿದೆ. ಹಲವು ವರ್ಷಗಳ ಕಾಲ ಅವರು ರಾಜ್ಯದ ಜನರಿಗಾಗಿ ಕೆಲಸ ಮಾಡಿದ್ದಾರೆ ಎಂದು ಈ ವೇಳೆ ಹೇಳಿದ್ದಾರೆ. ಕುಟುಂಬಸ್ಥರು ಆಸ್ಪತ್ರೆ ಹತ್ತಿರ ಪಾರ್ಥಿವ ಶರೀರ ಪಡೆಯಲು ನಿಂತಿದ್ದು, ಇಂದೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.