Ad imageAd image

ಹರಿಯಾಣ ಮಾಜಿ ಸಿಎಂ ಚೌಟಾಲಾ ನಿಧನ

Nagesh Talawar
ಹರಿಯಾಣ ಮಾಜಿ ಸಿಎಂ ಚೌಟಾಲಾ ನಿಧನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚಂಡೀಗಢ(Chandigarh): ಹಿರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ(89) ಅವರು ಗುರುಗ್ರಾಮ್ ದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮಧ್ಯಾಹ್ನ 12 ಹೃದಯಾಘಾತದಿಂದ ನಿಧನರಾಗಿದ್ದಾರೆ. ಬರೋಬ್ಬರಿ 5 ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಉಪ ಪ್ರಧಾನಿಯಾಗಿದ್ದ ದೇವಿಲಾಲ್ ಅವರ ಮಗನಾಗಿದ್ದಾರೆ.

ಭಾರತೀಯ ರಾಷ್ಟ್ರೀಯ ಲೋಕದಳ ಅಧ್ಯಕ್ಷರಾಗಿದ್ದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು ಮುಂಜಾನೆ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸಿದ ಕೆಲ ನಿಮಿಷಗಳಲ್ಲಿಯೇ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

5 ಬಾರಿ ಮುಖ್ಯಮಂತ್ರಿಯಾದರೂ ಪೂರ್ತಿಯಾಗಿ ಆಡಳಿತ ನಡೆಸಿದ್ದು ಒಮ್ಮೆ ಮಾತ್ರ. 1989ರಿಂದ 90ರ ತನಕ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಬನ್ಸಾರಿ ದಾಸ್ ಗುಪ್ತಾರನ್ನು ಏಕಾಏಕಿ ಕಳೆಗೆ ಇಳಿಸಿದಾಗ ಜುಲೈ 12, 1990ರಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿಯಾದರು. ಆದರೆ, 5 ದಿನಕ್ಕೆ ರಾಜೀನಾಮೆ ನೀಡಿದರು. ಮುಂದೆ ಏಪ್ರಿಲ್ 22, 1991ರಲ್ಲಿ 3ನೇ ಬಾರಿಗೆ ಮುಖ್ಯಮಂತ್ರಿಯಾದರು. ಆದರೆ, ಇಲ್ಲಿ 2 ವಾರಗಳ ರಾಷ್ಟ್ರಪತಿ ಆಡಳಿತವನ್ನು ಕೇಂದ್ರ ಸರ್ಕಾರ ಹೇರಿತು. 1999ರಲ್ಲಿ 4ನೇ ಬಾರಿಗೆ ಸಿಎಂ ಹಾಗೂ 2000ರಲ್ಲಿ 5ನೇ ಬಾರಿಗೆ ಸಿಎಂ ಆಗಿ 2005ರ ತನಕ ಆಡಳಿತ ನಡೆಸಿದರು.

WhatsApp Group Join Now
Telegram Group Join Now
Share This Article