ಪ್ರಜಾಸ್ತ್ರ ಸುದ್ದಿ
ತಿರುವನಂತಪುರಂ(Thiruvananthapuram): ಕಮ್ಯುನಿಸ್ಟ್ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ ಸೋಮವಾರ ನಿಧನರಾಗಿದ್ದಾರೆ. 101 ವರ್ಷದ ಇವರಿಗೆ ಜೂನ್ 23ರಂದು ಹೃದಯಾಘಾತವಾಗಿತ್ತು. ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಭಾರತದ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ಸ್ಥಾಪಕರಾಗಿದ್ದು, 1964ರಲ್ಲಿ ಸಿಪಿಐ ರಾಷ್ಟ್ರೀಯ ಮಂಡಳಿಯಿಂದ ಹೊರ ಬಂದು ಈ ಪಕ್ಷ ಸ್ಥಾಪಿಸಿದ್ದರು. 7 ಬಾರಿ ಶಾಸಕರಾಗಿದ್ದ ಇವರು 2006ರಿಂದ 2011ರ ತನಕ ಕೇರಳ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ನಿಧನಕ್ಕೆ ಕೇರಳ ರಾಜಕೀಯ ನಾಯಕರು ಸೇರಿದಂತೆ ಕಾಮ್ರೇಡ್ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.