ಪ್ರಜಾಸ್ತ್ರ ಸುದ್ದಿ
ಪಾಟ್ನಾ(Patna): ಬಿಹಾರ ವಿಧಾನಸಭೆ ಚುನಾವಣೆಯ ಕಣ ರಂಗೇರುತ್ತಿದೆ. ಇದರ ನಡುವೆ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿಯಲ್ಲಿ ಮಾಜಿ ಸಚಿವ ಸೇರಿ 11 ಜೆಡಿಯು ನಾಯಕರನ್ನು ಉಚ್ಛಾಟನೆ ಮಾಡಲಾಗಿದೆ. ಜೆಡಿಯು ಪ್ರಧಾನ ಕಾರ್ಯದರ್ಶಿ ಚಂದನ್ ಕುಮಾರ್ ಸಿಂಗ್ ಶನಿವಾರ ಸಂಜೆ ಉಚ್ಛಾಟಿತ ನಾಯಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಮಾಜಿ ಸಚಿವ ಶೈಲೇಶ್ ಕುಮಾರ್, ಮಾಜಿ ಶಾಸಕರಾದ ಸುದರ್ಶನ್ ಕುಮಾರ್, ಶ್ಯಾಮ್ ಬಹದ್ದೂರ್ ಸಿಂಗ್, ಮಾಜಿ ಎಂಎಲ್ಸಿಗಳಾದ ರಣವಿಜಯ್ ಸಿಂಗ್, ಸಂಜಯ್ ಪ್ರಸಾದ್ ಅವರು ಉಚ್ಛಾಟಿತ ನಾಯಕರ ಪಟ್ಟಿಯಲ್ಲಿದ್ದಾರೆ. ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ವಿರುದ್ಧ ಇವರು ಕೆಲಸ ಮಾಡುತ್ತಿದ್ದರು ಎಂದು ಹೇಳಿ ಪಕ್ಷದಿಂದ ಉಚ್ಛಾಟಿಸಲಾಗಿದೆ.




