ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ವಿವಿಧ ಕಾರ್ಯಕ್ರಮಗಳ ನಿಮಿತ್ತ ವಿಜಯಪುರ ಜಿಲ್ಲೆಗೆ ಭೇಟಿ ನೀಡಿದ್ದ ಮಾಜಿ ಸಚಿವಹಾಗೂ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ಹೆಚ್.ಆಂಜನೇಯ ಅವರು ಸಿಂದಗಿಗೂ ಭೇಟಿ ಕೊಟ್ಟು, ನಿರ್ಮಾಣ ಹಂತದಲ್ಲಿರುವ ಡಾ.ಬಾಬು ಜಗಜೀವನರಾಂ ಭವನವನ್ನು ವೀಕ್ಷಣೆ ಮಾಡಿದರು. ಕಾಮಗಾರಿಗೆ ಇನ್ನುಷ್ಟು ಅನುದಾನ ಬಿಡುಗಡೆ ಮಾಡುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ನಾನು ಶಿಫಾರಸು ಮಾಡುತ್ತೇನೆ. ಇನ್ನು ಒಳಮೀಸಲಾತಿ ಜನಗಣತಿ ವೇಳೆ ಸರಿಯಾಗಿ ಬರೆಯಿಸಿ ಎಂದು ಸಮಾಜದ ಮುಖಂಡರಿಗೆ ತಿಳಿಸಿದರು. ಈ ವೇಳೆ ದಲಿತ ಮುಖಂಡ ರವಿಕುಮಾರ ಹೊಸಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.