Ad imageAd image

ಮಾಜಿ ಸಚಿವ ದಿ.ಎಂ.ಸಿ ಮನಗೂಳಿ ಪುತ್ಥಳಿ ಲೋಕಾರ್ಪಣೆ

ಮಾಜಿ ಸಚಿವ ದಿವಂಗತ ಎಂ.ಸಿ ಮನಗೂಳಿಯವರ ಪುತ್ಥಳಿಯನ್ನು ಪಟ್ಟಣದಲ್ಲಿರುವ ಮನಗೂಳಿ ಆಸ್ಪತ್ರೆ ಹಾಗೂ ಆಯುರ್ವೇದಿಕ ಮೆಡಿಕಲ್ ಕಾಲೇಜು ಆವರಣದಲ್ಲಿ ಶನಿವಾರ ಅನಾವರಣಗೊಳಿಸಲಾಯಿತು.

Nagesh Talawar
ಮಾಜಿ ಸಚಿವ ದಿ.ಎಂ.ಸಿ ಮನಗೂಳಿ ಪುತ್ಥಳಿ ಲೋಕಾರ್ಪಣೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಮಾಜಿ ಸಚಿವ ದಿವಂಗತ ಎಂ.ಸಿ ಮನಗೂಳಿಯವರ ಪುತ್ಥಳಿಯನ್ನು ಪಟ್ಟಣದಲ್ಲಿರುವ ಮನಗೂಳಿ ಆಸ್ಪತ್ರೆ ಹಾಗೂ ಆಯುರ್ವೇದಿಕ ಮೆಡಿಕಲ್ ಕಾಲೇಜು ಆವರಣದಲ್ಲಿ ಶನಿವಾರ ಅನಾವರಣಗೊಳಿಸಲಾಯಿತು. ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯರು, ಊರನ ಮಠದ ಶಿವಾನಂದ ಶಿವಾಚಾರ್ಯರು, ಎಂ.ಸಿ ಮನಗೂಳಿಯವರ ಆಪ್ತರಾದ ಶಿವಪ್ಪಗೌಡ ಬಿರಾದಾರ ಹಾಗೂ ಕುಟುಂಬಸ್ಥರು ಪುತ್ಥಳಿ ಉದ್ಘಾಟಿಸಿದರು.

ಸಿಂದಗಿ ತಾಲೂಕಿಗೆ ನೀರಾವರಿ ಕ್ರಾಂತಿಯಾಗಲು ಎಂ.ಸಿ ಮನಗೂಳಿ ಪರಿಶ್ರಮ ಬಹುದೊಡ್ಡದಿದೆ. ರಾಜಕೀಯ ಸೋಲು ಗೆಲುವುಗಳ ನಡುವೆಯೂ ಜನರ ಮಧ್ಯದಲ್ಲಿರುತ್ತಿದ್ದರು ಎಂದು ಶಿವಪ್ಪಗೌಡ ಬಿರಾದಾರ ಹೇಳಿದರು. ಪ್ರಭುಸಾರಂಗದೇವ ಶಿವಾಚಾರ್ಯರು, ಶಿವಾನಂದ ಶಿವಾಚಾರ್ಯರು ಎಂ.ಸಿ ಮನಗೂಳಿಯವರ ಜನಮುಖಿ ಕಾರ್ಯಗಳನ್ನು ಬಣ್ಣಿಸಿದರು. ಈ ವೇಳೆ ಎಂ.ಸಿ ಮನಗೂಳಿಯವರ ಪತ್ನಿ ಸಿದ್ದಮ್ಮ, ಪುತ್ರರಾದ ಶಾಸಕ ಅಶೋಕ ಮನಗೂಳಿ, ಪ್ರಾಧ್ಯಾಪಕ ಅರವಿಂದ ಮನಗೂಳಿ, ಪುರಸಭೆ ಮಾಜಿ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಡಾ.ಮುತ್ತು ಮನಗೂಳಿ, ಸೊಸೆಯಂದಿರಾದ ನಾಗರತ್ನ ಅಶೋಕ ಮನಗೂಳಿ, ಅರುಣ ಅರವಿಂದ ಮನಗೂಳಿ, ಡಾ.ಸಂಧ್ಯ ಶಾಂತವೀರ ಮನಗೂಳಿ, ರಾಜೇಶ್ವರಿ ಮುತ್ತು ಮನಗೂಳಿ ಸೇರಿ ಕುಟುಂಬ ವರ್ಗ ಹಾಜರಿದ್ದರು.

ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಮಾತನಾಡಿದರು. ಕೃಷಿ ಇಲಾಖೆಯ ರಾಜ್ಯ ನಿರ್ದೇಶಕ ಫರ್ವೇಜ್ ಬಂಥನಾಳ, ಬಿ.ಜಿ ನೆಲ್ಲಗಿ, ಎಂ.ಎಂ ಹಂಗರಗಿ, ವಿಶ್ವನಾಥ ಕುರುಡೆ, ಶಂಕರಗೌಡ ಪಾಟೀಲ ಯಂಕಂಚಿ, ವಿ.ಎಸ್ ಮಾಗಣಗೇರಿ, ಬಿ.ಎಸ್ ಪಾಟೀಲ ಡಂಬಳ, ಸುನಂದಾ ಯಂಪುರೆ, ಪ್ರತಿಭಾ ಚಳ್ಳಗಿ, ಮಹಾನಂದ ಬಮ್ಮಣ್ಣಿ, ಶಶಿಕಲಾ ಅಂಗಡಿ, ಸಂಗೀತ ತಿಕೋಟಿ ಸೇರಿದಂತೆ ಎಂ.ಸಿ ಮನಗೂಳಿಯವರ ಅಭಿಮಾನಿಗಳ ಬಳಗ ಭಾಗವಹಿಸಿತ್ತು. ಎ.ಆರ್ ಹೆಗ್ಗನದೊಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧಲಿಂಗ ಕಿಣಗಿ ನಿರೂಪಿಸಿ ವಂದಿಸಿದರು.

WhatsApp Group Join Now
Telegram Group Join Now
Share This Article