ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ಉಪ ಲೋಕಾಯುಕ್ತರ ಭೇಟಿ ವೇಳೆ ವಿಜಯನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ(Women And Child Welfare Department) ಮಹಿಳಾ ಅಧಿಕಾರಿ ಶ್ವೇತಾ ಅವರು ಮಾಜಿ ಶಾಸಕ ಬಸವರಾಜ ದಡೇಸುಗೂರು ನನ್ನ ಗಂಡ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಉಪ ಲೋಕಾಯುಕ್ತರು ಪೋನ್ ಪೇ ಟ್ರಾನ್ಸಕ್ಷನ್ ಬಗ್ಗೆ ಕೇಳಿದ್ದಾರೆ. ಅದಕ್ಕೆ ಉತ್ತರ ನೀಡಿದ್ದಾರೆ. ನಿಮ್ಮ ಪತಿ ಯಾರೆಂದು ಕೇಳಿದಾಗ ಅವರು ರಾಜಕಾರಣಿ. ಬಸವರಾಜ ದಡೇಸುಗೂರು ಎಂದು ಹೇಳಿರುವುದು ವೈರಲ್ ಆಗಿದೆ.
ಮೂರು ವರ್ಷಗಳ ಹಿಂದೆ ಕೊಪ್ಪಳದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುವ ವೇಳೆ ದಡೇಸುಗೂರು ಜೊತೆಗಿನ ಸಂಭಾಷಣೆ ವೈರಲ್ ಆಗಿತ್ತು. ಬಸವರಾಜ ದಡೇಸುಗೂರು ಕನಕಗಿರಿಯ ಮಾಜಿ ಶಾಸಕರಾಗಿದ್ದಾರೆ. ಕೊಪ್ಪಳ ಬಿಜೆಪಿ(BJP) ಜಿಲ್ಲಾಧ್ಯಕ್ಷರಾಗಿದ್ದಾರೆ. ಇವರು 2ನೇ ಮದುವೆ ಆಗಿದ್ದಾರ ಎನ್ನುವ ಪ್ರಶ್ನೆ ಮೂಡಿದೆ.