ಪ್ರಜಾಸ್ತ್ರ ಸುದ್ದಿ
ಮೆಲ್ಬೋರ್ನ್(MCG): ಆಸ್ಟ್ರೇಲಿಯಾ ನೆಲದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೂರ್ನಿಯ ನಾಲ್ಕನೇ ಪಂದ್ಯದ 2ನೇ ದಿನವಾದ ಶುಕ್ರವಾರ ಟೀಂ ತನ್ನ ಮೊದಲ ಇನ್ನಿಂಗ್ಸ್ ಆಡುತ್ತಿದೆ. ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನಲೆಯಲ್ಲಿ ಟೀಂ ಇಂಡಿಯಾ ಆಟಗಾರರು ತೋಳಿಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ಗೌರವ ಸಲ್ಲಿಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಆಸೀಸ್ ಪಡೆಯನ್ನು 474 ರನ್ ಗಳಿಗೆ ಆಲೌಟ್ ಮಾಡಿದೆ. ಸ್ಟೀವ್ ಸ್ಮಿತ್ ಭರ್ಜರಿ 140 ರನ್ ಗಳಿಸಿ ತಂಡವನ್ನು 400ರ ಗಡಿ ದಾಟುವಂತೆ ಮಾಡಿದರು. ನಾಯಕ ಕಮಿನ್ಸ್ 49 ರನ್ ಗಳಿಸಿದರು. ಭಾರತ ಪರ ಬೂಮ್ರಾ 4, ಜಡೇಜಾ 3 ವಿಕೆಟ್ ಪಡೆದು ಮಿಂಚಿದರು. ಆಕಾಶ್ ದೀಪ್ 2, ವಾಸಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.
ಭಾರತ ತನ್ನ ಮೊದಲ ಇನ್ನಿಂಗ್ಸ್ ಪ್ರಾರಂಭಿಸಿದ್ದು, ಆರಂಭಿಕ ಆಘಾತ ಎದುರಿಸಿದೆ. ನಾಯಕ ರೋಹಿತ್ ಶರ್ಮಾ ಕೇವಲ 3 ರನ್ ಗಳಿಗೆ ಆಸೀಸ್ ನಾಯಕ ಕಮಿನ್ಸ್ ಬೌಲಿಂಗ್ ನಲ್ಲಿ ಸ್ಕಾಟ್ ಗೆ ಕ್ಯಾಚ್ ಕೊಟ್ಟು ಹೊರ ನಡೆದಿದ್ದಾರೆ. ಆಗ ತಂಡದ ರನ್ 8 ಆಗಿತ್ತು. ಜೈಸ್ವಾಲ್ 12, ಕೆ.ಎಲ್ ರಾಹುಲ್ 9 ರನ್ ಗಳೊಂದಿಗೆ ಆಡುತ್ತಿದ್ದಾರೆ.