ಪ್ರಜಾಸ್ತ್ರ ಸುದ್ದಿ
ಜಮಖಂಡಿ(Jamakandi): ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿ ಮಗು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಕಟ್ಟೆ ಕೆರೆ ಹತ್ತಿರ ನಡೆದಿದೆ. ಟ್ರ್ಯಾಕ್ಟರ್ ಪಲ್ಟಿಯಾಗಿ ಇಂತಹದೊಂದು ದುರಂತ ಸಂಭವಿಸಿದೆ. ಮೃತರೆಲ್ಲ ಮಹಾರಾಷ್ಟ್ರ ಮೂಲದವರೆಂದು ತಿಳಿದು ಬಂದಿದೆ.
ಮನೀಸ್ ಪಾಂಡೆ, ಲಕ್ಷ್ಮಿ ಚಿಮರಡಿ, ರೇಖಾ ಭೋಕೆ ಹಾಗೂ 2 ವರ್ಷದ ಮಗು ಹಲಕಿ ಪಾಂಡೆ ಮೃತ ದುರ್ದೈವಿಗಳು. ಹಲವರು ಗಾಯಗೊಂಡಿದ್ದು ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




