ಪ್ರಜಾಸ್ತ್ರ ಸುದ್ದಿ
ಸರನ್(Saran): ಅತಿಯಾದ ಚಳಿಯಿಂದಾಗಿ ಮೈ ಕಾಯಿಸಿಕೊಳ್ಳಲು ಹಚ್ಚಿದ ಬೆಂಕಿಯಿಂದ ನಾಲ್ವರು ಪ್ರಾಣ ಕಳೆದುಕೊಂಡ ದುರಂತ ಬಿಹಾರದ ಸರನ್ ಜಿಲ್ಲೆಯ ಭಗವಾನ್ ಬಜಾರ್ ಪ್ರದೇಶದಲ್ಲಿ ನಡೆದಿದೆ. ಮೂವರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಪ್ರಜ್ಞೆ ಕಳೆದುಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರು ಎಸ್ಪಿ ಕುಮಾರ್ ಆಶಿಶ್ ತಿಳಿಸಿದ್ದಾರೆ.
ಮನೆಯ ಕೊಠಡಿಯೊಂದರ ಮೂಲೆಯಲ್ಲಿ ಬೆಂಕಿ ಹಾಕಿ ಬಾಗಿಲು ಹಾಕಿಕೊಂಡು ಮಲಗಿದ್ದಾರೆ. ಬಳಿಕ ಕೊಠಡಿ ತುಂಬಾ ಹೊಗೆ ಆಗಿ, ಉಸಿರಾಡಲು ಸಮಸ್ಯೆಯಾಗಿದೆ. ಬಾಗಿಲು ಮುಚ್ಚಿದ್ದರಿಂದ ಗಾಳಿ ಇಲ್ಲದ ಪರಿಣಾಮ ನಾಲ್ಕು ಜೀವಗಳು ಹೋಗಿವೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ವಿಧಿ ವಿಜ್ಞಾನ ಪ್ರಯೋಗಾಲದ ತಂಡ ಸಹ ತನಿಖೆಯಲ್ಲಿ ಭಾಗವಹಿಸಿದೆ.




