ಪ್ರಜಾಸ್ತ್ರ ಸುದ್ದಿ
ಐಪಿಎಲ್-2025ರ ಟೂರ್ನಿ ಇದೀಗ ಕೊನೆಯ ಹಂತಕ್ಕೆ ಬಂದಿದೆ. ನಾಲ್ಕು ತಂಡಗಳು ಪ್ಲೇ ಆಫ್ ಪ್ರವೇಶಿಸಿವೆ. ಆದರೆ, ಎರಡು ತಂಡಗಳ ನಡುವೆ ಅಗ್ರ ಸ್ಥಾನಕ್ಕಾಗಿ ಫೈಟ್ ನಡೆಯಲಿದೆ. ಆರ್ ಸಿಬಿ, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿವೆ. ಈಗಾಗ್ಲೇ ಟಾಪ್ 1ರಲ್ಲಿ ಇರುವ ಗುಜರಾತ್ ಟೈಟಾನ್ಸ್ 12 ಪಂದ್ಯಗಳಲ್ಲಿ 18 ಅಂಕ ಗಳಿಸಿದೆ. ಇನ್ನು 2 ಪಂದ್ಯಗಳು ಬಾಕಿ ಉಳಿದಿವೆ.
ಇನ್ನು ಆರ್ ಸಿಬಿ 12 ಪಂದ್ಯಗಳಲ್ಲಿ ಆರ್ ಸಿಬಿ 17 ಪಾಯಿಂಟ್ ಗಳಿಸಿ 2ನೇ ಸ್ಥಾನದಲ್ಲಿದೆ. ಮೇ 23 ರಂದು ಹೈದ್ರಾಬಾದ್ ವಿರುದ್ಧ, ಮೇ 27ರಂದು ಲಖನೌ ವಿರುದ್ಧ ಆಡಲಿದೆ. ಎರಡೂ ಪಂದ್ಯಗಳನ್ನು ಗೆದ್ದರೆ ಅಗ್ರ ಸ್ಥಾನಕ್ಕೆ ಬರಲಿದೆ. ಒಂದು ಪಂದ್ಯ ಗೆದ್ದರೂ ಸಹ ಟಾಪ್ ನಲ್ಲಿ ಉಳಿಯಲಿದೆ. ರನ್ ರೇಟ್ ಸಹ ಮುಖ್ಯವಾಗಲಿದೆ. ಪಂಜಾಬ್ ಸಹ 12 ಪಂದ್ಯಗಳಿಂದ 17 ಅಂಕ ಗಳಿಸಿದೆ. ಇನ್ನು ಆರಂಭದಲ್ಲಿ ಸೋಲುಗಳನ್ನು ಕಾಣುತ್ತಾ ಬಂದ ಮುಂಬೈ ಇಂಡಿಯನ್ಸ್ ನಂತರ ಸತತ 6 ಪಂದ್ಯಗಳನ್ನು ಗೆದ್ದಿದೆ. 13 ಪಂದ್ಯಗಳಿಂದ 16 ಅಂಕ ಗಳಿಸಿ ಪ್ಲೇ ಆಫ್ ಗೆ ಬಂದಿದ್ದು, ಇನ್ನೊಂದು ಪಂದ್ಯ ಬಾಕಿ ಉಳಿದಿದೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ಕದನದ ಹಿನ್ನೆಲೆಯಲ್ಲಿ ಪಂದ್ಯಗಳನ್ನು ಮುಂದೂಡಲಾಗಿತ್ತು. ಮತ್ತೆ ಶುರುವಾದ ಬಳಿಕ ಮಳೆರಾಯನ ಆಟ ನಡೆದಿದೆ. ಹೀಗಾಗಿ ಕೆಲ ಪಂದ್ಯಗಳು ರದ್ದಾಗಿದ್ದು, ಪವರ್ ಪ್ಲೇ ಪಂದ್ಯಗಳು ಹಾಗೂ ಫೈನಲ್ ಪಂದ್ಯ ಗುಜರಾತಿಗೆ ಸ್ಥಳಾಂತರಗೊಂಡಿವೆ. ಸತತ 18 ವರ್ಷಗಳಿಂದ ಒಮ್ಮೆಯೂ ಕಪ್ ಗೆಲ್ಲದ ಆರ್ ಸಿಬಿ ಈ ಬಾರಿಯೂ ಗೆದ್ದರೂ ಚಾಂಪಿಯನ್ಸ್ ಬರ ನೀಗಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.