ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದ ವಿವೇಕಾನಂದ ಸರ್ಕಲ್ ಹತ್ತಿರದಲ್ಲಿರುವ ಶ್ರೀ ಮಾತಾ ಆಸ್ಪತ್ರೆಯು ಒಂದು ವರ್ಷ ಪೂರ್ಣಗೊಳಿಸಿದೆ. ಹೀಗಾಗಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಶಿವಕುಮಾರ ಪಶುಪತಿಮಠ(ಆಲಮೇಲ) ಹಾಗೂ ಡಾ.ದೀಪಾ ಪಶುಪತಿಮಠ ಅವರ ನೇತೃತ್ವದಲ್ಲಿ ಮಾರ್ಚ್ 16, 2025ರ ಭಾನುವಾರದಂದು ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಆಸ್ಪತ್ರೆಯಲ್ಲಿ ಮುಂಜಾನೆಯಿಂದ ಸಂಜೆಯ ತನಕ ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ವಿವಿಧ ಧೀರ್ಘಕಾಲದ ಅನಾರೋಗ್ಯಕ್ಕೆ ಉಚಿತ ತಪಾಸಣೆ ನಡೆಸಲಾಯಿತು.

ನೂರಾರು ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದರು. ರಿಯಾಯಿತಿ ದರದಲ್ಲಿ ವೈದ್ಯರ ಸಂದರ್ಶನ, ರಕ್ತ ಪರೀಕ್ಷೆ, ಔಷಧಿಗಳ ವಿತರಣೆಯನ್ನು ಸಹ ಮಾಡಲಾಯಿತು. ಈ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಪುಷ್ಯ ನಕ್ಷದಂದು 6 ತಿಂಗಳಿಂದ 16 ವರ್ಷದ ಮಕ್ಕಳಿಗೆ ಸ್ವರ್ಣ ಬಿಂದು ಪ್ರಾಶನ ಹಾಕಲಾಗುತ್ತದೆ. ತಜ್ಞ ವೈದ್ಯರು ಆಗಾಗ ಭೇಟಿ ನೀಡಿ ಪಾರ್ಶುವಾಯು, ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಾರೆ.