ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸಾಹಿತ್ಯ, ರಂಗಭೂಮಿ ಸೇರಿದಂತೆ ಸಾಂಸ್ಕೃತಿ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿರುವ ಮಾಧ್ಯಮರಂಗ ಫೌಂಡೇಶನ್ ನ 2ನೇ ವರ್ಷಾಚರಣೆ ಪ್ರಯುಕ್ತ ಇದೇ ಮೊದಲ ಬಾರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಆಯೋಜಿಸಿದೆ. ಪಟ್ಟಣದ ಬಸವ ಮಂಟಪದಲ್ಲಿ ಫೆಬ್ರವರಿ 28, ಶುಕ್ರವಾರ ಮುಂಜಾನೆ 10 ಗಂಟೆಯಿಂದ ಸಂಜೆ 4 ಗಂಟೆಯ ತನಕ ತಪಾಸಣೆ ನಡೆಯಲಿದೆ. ಬಿಪಿ, ಶುಗರ್, ಹೃದಯ ಸಮಸ್ಯೆ, ಸೊಂಟ, ಮೊಳಕಾಲು ನೋವು, ಹಲ್ಲು ಮತ್ತು ವಸಡಿನ ಸಮಸ್ಯೆ ಸೇರಿದಂತೆ ಹಲ್ಲಿಗೆ ಸಂಬಂಧಿಸಿದ ತೊಂದರೆಗಳ ತಪಾಸಣೆಯನ್ನು ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಜನರು ಇದರಲ್ಲಿ ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆಯಬೇಕೆಂದು ಮಾಧ್ಯಮರಂಗ ಫೌಂಡೇಶನ್ ಅಧ್ಯಕ್ಷ, ಪತ್ರಕರ್ತ ನಾಗೇಶ ತಳವಾರ ತಿಳಿಸಿದ್ದಾರೆ.
ಡಾ.ಇಲಿಯಾಸ್ ಜಾಲಿಗೇರಿ ಅವರ ಜಾಲಿಗೇರಿ ಆಸ್ಪತ್ರೆ, ಡಾ.ಅರ್ಜುನ ಗೊಟಗುಣಕಿ ಅವರ ಪಾರ್ವತಿ ಲೈಫ್ ಲೈನ್ ಆಸ್ಪತ್ರೆ ಹಾಗೂ ಡಾ.ಚನ್ನಬಸವ ಗೊಟಗುಣಕಿ ಅವರ ಮುಗುಳ್ನಗೆ ಹಲ್ಲಿನ ದವಾಖಾನೆ ಅವರ ಸಹಕಾರೊಂದಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ಶ್ರೀ ಮಾತಾ ಆಸ್ಪತ್ರೆಯ ಡಾ.ಶಿವಕುಮಾರ ಪಶುಪತಿಮಠ ಆರೋಗ್ಯ ಶಿಬಿರ ಉದ್ಘಾಟಿಸಲಿದ್ದಾರೆ. ಸಂಗಮೇಶ್ವರ ಆಸ್ಪತ್ರೆಯ ಡಾ.ಶಿವಾನಂದ ಹೊಸಮನಿ, ಸಂಜೀವಿನಿ ಆಸ್ಪತ್ರೆಯ ಡಾ.ಹಬೀಬ್ ನಾಗರಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಸಮಾರಂಭವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿಗಳಾದ ಪೀರು ಕೆರೂರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಯನಿರತ ಪ್ರತಕರ್ತರ ಧ್ವನಿ ಸಂಘದ ತಾಲೂಕಾಧ್ಯಕ್ಷ ಪಂಡಿತ ಯಂಪೂರೆ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನವರ, ನಮ್ಮ ಕರ್ನಾಟಕ ಸೇನೆಯ ತಾಲೂಕಾಧ್ಯಕ್ಷ ಪುಂಡಲೀಕ ಬಿರಾದಾರ ಭಾಗವಹಿಸಲಿದ್ದಾರೆ.