ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ಇಲ್ಲಿನ ಗಾಂಧಿ ವೃತ್ತದಲ್ಲಿ ಅವರ ಮೂರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ನೇತೃತ್ವದ ಹೋರಾಟದಿಂದ ದೇಶಕ್ಕೆ ಸ್ವಾತಂತ್ಯ ಸಿಕ್ಕಿದೆ. ಅವರ ತ್ಯಾಗ, ಬಲಿದಾನ ಸ್ಮರಿಸಿಕೊಳ್ಳಬೇಕು ಅಂತಾ ಹೇಳಿದರು.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯ ಅವರ ಜಯಂತಿ ಸಹ ಇದ್ದು, ಅವರ ಪ್ರಾಮಾಣಿಕತೆ, ಸರಳತೆ ಎಲ್ಲರಿಗೂ ಆದರ್ಶ. ಇನ್ನು ವಿಜಯದಶಮಿಯ ಹಬ್ಬದ ಮೆರವಣಿಗೆ ನಡೆಯುತ್ತಿದೆ. ಎಲ್ಲರಿಗೂ ಶುಭಾಶಯಗಳು ಎಂದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹಾದೇವಪ್ಪ ಸೇರಿ ಹಲವು ಇದ್ದರು.