ಪ್ರಜಾಸ್ತ್ರ ವಿಶೇಷ ಲೇಖನ
ಒಂದು ಕಾಲದಲ್ಲಿ ಕರ್ನಾಟಕದ ಸಾಹಿತ್ಯ ವಲಯದಲ್ಲಿ ಬಹುದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದ ಹೇಳಿಕೆ ಎಂದರೆ ಬಿ.ಬಸವಲಿಂಗಪ್ಪನವರ ಹೇಳಿಕೆ. ಆ ಹೇಳಿಕೆ ನಾಡಿನ ಸಾಹಿತ್ಯ ವಲಯದ ಬುಡವನ್ನು ಅಲುಗಾಡಿಸಿತ್ತು. ಅದರ ಹಿಂದಿನ ನಡೆ ಏನು ಅನ್ನೋದನ್ನು ಬರಹಗಾರ ಬಸವ ಪಾಟೀಲ ಅವರು ತಮ್ಮ ಈ ಲೇಖನದಲ್ಲಿ ಹೇಳಿದ್ದಾರೆ.

ಸಮಕಾಲಿನ ಸಾಹಿತ್ಯವನ್ನ ‘ಬೂಸಾ ಸಾಹಿತ್ಯ’ ಎಂದು ರಾಜಕಾರಣಿಯೊಬ್ಬರು ಹೇಳಿದ್ದರು. ಆ ರಾಜಕಾರಣಿಯ ಹೆಸರು ಬಿ.ಬಸವಲಿಂಗಪ್ಪ. ಈ ರಾಜಕಾರಣಿ ನಾ ಹುಟ್ಟುಕಿನ್ನ ಮೊದಲೆ ಲಿಂಗೈಕ್ಯರಾಗಿದ್ದರು. ಅಂತಹ ರಾಜಕಾರಣಿ, ದಾಸೋಹಿಯ ಭಾವ ಅವರು ಲಿಂಗೈಕ್ಯರಾದ ಮೇಲು ಜೀವಂತ! ಅದು ನನ್ನ ವೈಚಾರಿಕತೆಯ ಅಡಿಗಲ್ಲು. ಜಂಗಮವಾದ ಸಮಾಜ ಅದರ ಸಾಹಿತಿಗಳು. ಉಪದ್ಯಾಪಿ ಪುರಾಣ ಮತ್ತ ಅದರ ವಾಖ್ಯಾನ ಬರಿಮುಂದ ಸಮಾಜಿಕ ರಾಜಕಾರಣಿ ಮಲ ಹೊರುವ ಪದ್ಧತಿಯನ್ನು ಕಾನೂತ್ಮಕವಾಗಿ ನಿಷೇಧಿಸಿದ್ದರು. ಆಗ ಅವರಿಗೆ ಅಗ್ರಹಾರದವರು, ಜಾತಿ ಶ್ರೇಷ್ಠರು ಅವರನ್ನ ನಮೂದಿಸಲಿಲ್ಲ. ಅಷ್ಟೆ ಅಲ್ಲ ಸಾಹಿತ್ಯದ ವಲಯ ಮತ್ತು ಪತ್ರಿಕೆಯ ವರದಿಯಲ್ಲಿ, ಚರ್ಚೆ ಆಗಲಿಲ್ಲ. ಆವಾಗೆ ಅವರು ಕ್ರಾಂತಿಕಾರಿ ಹೇಳಿಕೆ ನೀಡಿದರು. ಕನ್ನಡ ಸಾಹಿತ್ಯ ಬೂಸಾ ಸಾಹಿತ್ಯ ಅಲ್ಲೆ ಹತ್ತತ ನೋಡರಿ, ದಾರದ ಮತ್ತು ಜಾತಿವಾದಿ ಸಾಹಿತ್ಯಕಾರರಿಗಿ ಬೆಂಕಿ!
ಎಂತಹ ದುರಂತ ನೋಡರಿ ದಾರದ ಮಾಧ್ಯಮ ನಿಮಗ ಇವತ್ತ ಬಿ.ಬಸವಲಿಂಗಪ್ಪನವರ ನಿಧನದ ದಿನ ಅಂತ ನೆನಪಿಸಲೇ ಇಲ್ಲ. ಈ ದಿನ ಪತ್ರಿಕೆ ನೆನಪಿಸ್ತು. ನಾನು “ಅಂಬೇಡ್ಕರ ಐತಿಹಾಸಿಕ ತಿಂಗಳು” ಅನ್ನು ಟ್ವೀಟರ್ ಸ್ಪೇಸ್ ಕಾರ್ಯಕ್ರಮದಲ್ಲಿ ಎರಡು ವರ್ಷ ಮಾಡಿದ ಕಾರ್ಯಕ್ರಮ ಕೇಳುಗರಾದ ಇತಿಹಾಸದ ಪ್ರಾಧ್ಯಾಪಕ ಇವತ್ತ ಮತ್ತೋಮ್ಮೆ ನೆನಪಿಸಿದರ, ಅಣ್ಣಾ ಅವಾಗಿದ್ದ ಬೂಸೂ ಈಗೂ ಆಯಿತಿ ಅಂತ.
ಸಾಹಿತ್ಯ, ಹ್ಯಾಂಗ ಇರಬೇಕು: ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು. ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯಾ? ಇಂತಹ ನುಡಿಯೊಳಗಾಗಿ ನಡಿಯದಿದ್ದವರೆಗೆ ಬಿ.ಬಸವಲಿಂಗಪ್ಪನವರು ಬೂಸಾ ಸಾಹಿತ್ಯ ನಿಮ್ಮದು ಅಂದಿದ್ದು. ಅವರ ಮಾರ್ಗದರ್ಶನದಿಂದೆ ನಮಗ ಬಂಡಾಯ ಸಾಹಿತ್ಯ ಸಿಕ್ಕತು. ಶರಣ ಸಿದ್ಧಲಿಂಗಯ್ಯ ಸಿಕ್ಕರು, ಕುಂವೀ ಸಿಕ್ಕರು, ಚೆನ್ನಣ್ಣ ವಾಲೀಕಾರ ಸಿಕ್ಕರು, ಕಡಿಗಿ ನಮ್ಮ ಸತ್ವ ನಾವು ಪ್ರತಿನಿಧಿಸಿದ್ವಿ. ಬಂಡಾಯ ಸಾಹಿತ್ಯ ಬೂಸಾ ಅಲ್ಲ, ಸತ್ವ, ತತ್ವ ಮತ್ತು ಪ್ರತಿರೋಧ ವ್ಯಕ್ತ ಪಡಿಸಿದವಿ. ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ತಮ್ಮ “ಎದೆಯ ಹಣತೆ”ಯ ಬೆನ್ನುಡಿಯಲ್ಲಿ ಬರಿತಾರೆ, ನಾನು ಬಂಡಾಯದ ಸಾಹಿತ್ಯದ “ಲಾಭಾರ್ಥಿ”ಯಂತ. ಶರಣ ಬಿ.ಬಸವಲಿಂಗಪ್ಪನವರೆ ನಿಮ್ಮ ಹುಟ್ಟು ನಮಗೆ ಕ್ರಾಂತಿ, ಬದುಕು ಪ್ರತಿಕ್ರಾಂತಿ. ಕನ್ನಡ ಸಾಹಿತ್ಯ ಎಲ್ಲಿಯವರೆಗೂ ನಮ್ಮನ್ನ ಪ್ರತಿನಿಧಿಸಲ್ವೋ ಅಲ್ಲಿಯವರೆಗೂ ಅದು “ಬೂಸಾ ಸಾಹಿತ್ಯ. ಶರಣು ನಿಮ್ಮ ಕ್ರಾಂತಿಕಾರಿ ಮುನ್ನುಡಿಗೆ.




