ಪ್ರಜಾಸ್ತ್ರ ಸುದ್ದಿ
ಪುದುಚೇರಿ(Puducherry): ಶನಿವಾರ ರಾತ್ರಿ ಬಂಗಾಳಕೊಲ್ಲಿಯಲ್ಲಿ ಫಂಗಲ್ ಚಂಡಮಾರುತ(Fengal Cyclone) ಅಪ್ಪಳಿಸಿದೆ. ಇದರ ಪರಿಣಾಮ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಭಾರೀ(Rain) ಮಳೆಯಾಗಿದೆ. 24 ಗಂಟೆಯಲ್ಲಿ ಬರೋಬ್ಬರಿ 46 ಸೆ.ಮೀ ಮಳೆಯಾಗಿದೆ. ಇದರಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಅನೇಕ ಕಡೆ ನೀರು ನುಗ್ಗಿದ್ದು, ಜನರ ರಕ್ಷಣೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮುಂದಿನ ಕೆಲ ಗಂಟೆಗಳಲ್ಲಿ ಇದರ ಪ್ರಮಾಣ ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪುದುಚೇರಿ ಹತ್ತಿರದ ಕಾರೈಕಲ್ ಹಾಗೂ ಮಹಾಬಲಿಪುರಂ ಮಧ್ಯ ಫಂಗಲ್ ಚಂಡಮಾರುತ ಅಪ್ಪಳಿಸಿದೆ. ಹೀಗಾಗಿ ತಮಿಳುನಾಡಿನ ಚೆನ್ನೈ ಸೇರಿದಂತೆ ಕರಾವಳಿ, ಉತ್ತರ ತಮಿಳುನಾಡು ಭಾಗದಲ್ಲಿ ಮಳೆಯಾಗುತ್ತಿದೆ. ಅನೇಕ ಕಡೆ ಅಂಗಡಿಮುಂಗಟ್ಟುಗಳನ್ನು ಮುಚ್ಚಲಾಗಿದೆ. ಪುದುಚೇರಿಯಲ್ಲಿ ಕಳೆದ ರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಬಂದ್ ಆಗಿದೆ. ಸರ್ಕಾರಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ. 30 ವರ್ಷಗಳ ಬಳಿಕ ಪುದುಚೇರಿಯಲ್ಲಿ ಇಂತಹದೊಂದು ಪರಿಸ್ಥಿತಿ ಎದುರಾಗಿದೆ ಎಂದು ತಿಳಿದು ಬಂದಿದೆ.