ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(HDK) ಹಾಗೂ ಲೋಕಾಯುಕ್ತ ಎಸ್ಐಟಿ(SIT) ಎಡಿಜಿಪಿ ಚಂದ್ರಶೇಖರ್ ನಡುವೆ ಸಮರ ನಡೆಯುತ್ತಿದೆ. ಕುಮಾರಸ್ವಾಮಿಯನ್ನು ಹಂದಿಗೆ ಹೋಲಿಸಿ ಬರೆದಿದ್ದ ಸಾಲುಗಳ ವಿರುದ್ಧ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಐಪಿಎಸ್ ಅಧಿಕಾರಿಯಾಗಲು ನೀವೊಬ್ಬ ಅನರ್ಹ. ಕೇಂದ್ರ ಸಚಿವರಿಗೆ ಇಂತಹ ಪದ ಬಳಕೆ ಅಕ್ಷಮ್ಯ ಅಪರಾಧ ಅಂತಾ ಕಿಡಿ ಕಾರಲಾಗಿದೆ.
ಇನ್ನು ಎಡಿಜಿಪಿ ವಿರುದ್ಧ ಸ್ವತಃ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು, 20 ಕೋಟಿಗೆ ಬೇಡಿಕೆ ಇಟ್ಟ ಕಡುಭ್ರಷ್ಟ ಅಧಿಕಾರಿ ನೀವಲ್ಲವೇ? ಭೂವ್ಯವಹಾರದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿ, ಪತ್ನಿ ಹೆಸರಲ್ಲಿ ರಾಜಕಾಲುವೆ ಜಾಗದ ಮೇಲೆ ಬಹುಮಹಡಿ ಕಟ್ಟಡ ಕಟ್ಟುತ್ತಿರುವುದು ಎಷ್ಟು ಕೋಟಿ ಲಂಚ ಪಡೆದು, ಕೆರೆ ಒತ್ತುವರಿ ಮಾಡಿಕೊಂಡ ಅಕ್ರಮದ ಬಗ್ಗೆ ತನಿಖೆ ಮಾಡಬೇಕಲ್ಲವೇ ಎನ್ನುವ ವಿಚಾರಗಳು ಸೇರಿದಂತೆ ಅನೇಕ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಮೂಲಕ ಹಿರಿಯ ಐಪಿಎಸ್(ADGP Chandrashekhar) ಅಧಿಕಾರಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ನಡುವೆ ನೇರಾನೇರ ಫೈಟ್ ನಡೆದಿದೆ. ಆದರೆ, ಇವರು ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಯಾಕೆ ಮಾಡುತ್ತಿಲ್ಲ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.