ಪ್ರಜಾಸ್ತ್ರ ಸುದ್ದಿ
ಟೆಕ್ಸಾಸ್: ನಾಸಾದಿಂದ ಗಗನಯಾಗಿ ಸುನಿತಾ ವಿಲಿಯಮ್ಸ್ ನಿವೃತ್ತಿಯಾಗಿದ್ದಾರೆ. ಡಿಸೆಂಬರ್ 27, 2025ರಂದು ನಾಸಾದಿಂದ ನಿವೃತ್ತಿಯಾಗಿದ್ದಾರೆ ಎಂದು ಮಂಗಳವಾರ ನಾಸಾ ತಿಳಿಸಿದೆ. ಚಂದ್ರ ಹಾಗೂ ಮಂಗಳ ಗ್ರಹದತ್ತ ತೆರಳುವ ನಮ್ಮ ಪ್ರಯತ್ನಗಳಿಗೆ ಅವರು ಸುಭದ್ರ ಅಡಿಪಾಯ ಹಾಕಿದ್ದಾರೆ. ಅವರ ಸಾಧನೆಗಳು ಮುಂದಿನ ಜನಾಂಗಕ್ಕೆ ಸ್ಪೂರ್ತಿಯಾಗಿದೆ ಎಂದು ನಾಸಾ ಆಡಳಿತಾಧಿಕಾರಿ ಜಾರೆಡ್ ಐಸಾಕ್ ಮ್ಯಾನ್ ಹೇಳಿದ್ದಾರೆ.
1998ರಿಂದ ಗಗನಯಾನಿಯಾಗಿ ಸುನಿತಾ ವಿಲಿಯಮ್ಸ್ ನಾಸಾಗೆ ಸೇರಿದರು. 2006, 2022 ಹಾಗೂ 2024ರಲ್ಲಿ ಬಾಹ್ಯಾಕಾಶ ಮಿಷನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. 608 ದಿನಗಳ ಕಾಲ ಬಾಹ್ಯಾಕಾಶದಲ್ಲಿ ನೆಲೆಸಿದ್ದರು. ಅಲ್ಲದೆ 9 ಬ್ಯಾಹಾಕಾಶ ನಡಿಗೆಗಳನ್ನು ಪೂರ್ಣಗೊಳಿಸಿದ್ದಾರೆ. ಸುನಿತಾ ವಿಲಿಯಮ್ಸ್ ವಂಶಸ್ಥರು ಭಾರತದ ಗುಜರಾತ್ ಮೂಲದವರು. ಇವರ ತಂದೆ ದೀಪಕ್ ಪಾಂಡ್ಯ 1957ರಿಂದಲೇ ಅಮೆರಿಕಾದಲ್ಲಿ ವಾಸವಾಗಿದ್ದರು. ಸ್ಲೊವೆನಿಯಾ ಮೂಲದ ಉರ್ಸುಲಿನ್ ಬೊನ್ನಿ ಝಲೊಕಾರ್ ಎಂಬುವರನ್ನು ಮದುವೆಯಾದರು.




