ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದ ವಿದ್ಯಾಚೇತನ ಶಾಲೆಯಲ್ಲಿ ರಾಷ್ಟ್ರಪತಿ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿಯನ್ನು ಆಚರಿಸಲಾಯಿತು. ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಿಕ್ಷಕ ಸಂಜೀವಕುಮಾರ ಡಾಂಗಿ, ಅಹಿಂಸೆ, ಸತ್ಯಾಗ್ರಹದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವ ಮೂಲಕ ಶಾಂತಿಯಿಂದಲೇ ಬಹುದೊಡ್ಡ ಬದಲಾವಣೆ ಸಾಧ್ಯ ಅಂತಾ ತೋರಿಸಿಕೊಟ್ಟಿದ್ದಾರೆ. ಹಾಗೇ ಪ್ರಧಾನಿಯ ಹುದ್ದೆಗೆ ಏರಿದ ಲಾಲ್ ಬಹದ್ದೂರ್ ಶಾಸ್ತ್ರೀಯವರ ಪ್ರಾಮಾಣಿಕ ಆಡಳಿತ, ಸರಳ ಬದುಕು ಪ್ರತಿಯೊಬ್ಬರಿಗೂ ಮಾದರಿ. ಇವರಿಬ್ಬರ ತತ್ವ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಅಧ್ಯಕ್ಷೆ ಕುಸುಮಾ ಯಾಳಗಿಯವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ವಿದ್ಯಾರ್ಥಿಗಳಾದ ಈಶ್ವರಿ ಭೂಶೆಟ್ಟಿ, ಅರ್ಪಿತಾ ಕಾಂಬಳೆ, ಪೂರ್ಣಿಮಾ ಬಮ್ಮಣ್ಣಿ, ಭಾರ್ಗವಿ, ಸೃಷ್ಟಿ ಅಂಬಿಗೇರ, ಸಂಗಮೇಶ ಕುಂಬಾರ, ಶಂಕರ ಗಿರಣಿ ಭಾಷಣ ಮಾಡಿದರು. ಕರ್ತಿಕ ಹಂಚನಾಳ ಗಾಂಧಿ ಕುರಿತು ಹಾಡು ಹಾಡಿದ. ಶಿಕ್ಷಕಿ ಸುಮಾ ವಂದೆ ಮಾತರಂ ಗೀತೆ ಹಾಡಿದರು. ಶಿಕ್ಷಕ ವಿಕಾಸ ನಿರೂಪಿಸಿದರು. ಶಿಕ್ಷಕರಾದ ಅಕ್ಷಯ, ಸಕ್ಕುಬಾಯಿ ಡಾಂಗಿ, ರೂಪಾ ಸೂರಪ್ಪಗೊಂಡ, ದೀಕ್ಷಾ ಕನ್ನೊಳ್ಳಿ, ಪ್ರಗತಿ ಹಿರೇಮಠ, ಲಕ್ಷ್ಮಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.