ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ನಗರದಲ್ಲಿ ಗಣೇಶ ವಿಸರ್ಜನೆ ಭರ್ಜರಿಯಾಗಿ ನಡೆದಿದೆ. 11 ದಿನದ ಗಣೇಶನನ್ನು ಶನಿವಾರ ಕಳಿಸಿಕೊಡಲಾಯಿತು. ಸಂಜೆ ಸುಮಾರು 4 ಗಂಟೆಯಿಂದ ಮೆರವಣಿಗೆ ಮೂಲಕ ವಿಸರ್ಜನೆ ಮೆರವಣಿಗೆ ನಡೆದಿದ್ದು, ಭಾನುವಾರ ಮಧ್ಯಾಹ್ನದವರೆಗೂ ನಡೆದಿವೆ. ಡಿಜೆ ಗದ್ದಲವಿಲ್ಲದೆ ಮೆರವಣಿಗೆ ಸಾಗಿತು. 378 ಮೂರ್ತಿಗಳಲ್ಲಿ ಭಾನುವಾರ ಮುಂಜಾನೆ 11 ಗಂಟೆಯವರೆಗೆ 300 ಮೂರ್ತಿಗಳು ವಿಸರ್ಜನೆಗೊಂಡಿವೆ.
ಸ್ಥಳದಲ್ಲಿ ಇನ್ನು 78 ಮೂರ್ತಿಗಳು ಹೊಂಡಗಳ ಮುಂದೆ ಸಾಲುಗಟ್ಟಿ ನಿಂತಿವೆ. ನಗರದ 8 ಕಡೆ ಹೊಂಡಗಳನ್ನು ನಿರ್ಮಿಸಲಾಗಿದೆ. ಜಕ್ಕೇರಿ ಹೊಂಡದ ಹತ್ತಿರ ಹೆಚ್ಚಿನ ಸಂಖ್ಯೆಯಲ್ಲಿ ಗಣೇಶಮೂರ್ತಿಗಳು ಬಂದಿವೆ. ಕ್ರೇನ್ ಮೂಲಕ ಬೃಹತ್ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ.