ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿರುವ ಗಜಾನನ ಮಹಾ ಮಂಡಳಿಯಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಗಂಗಾ ಆರತಿ ನಡೆಯಿತು. ವಾರಣಾಸಿಯಿಂದ ಆಗಮಿಸಿದ್ದ ಐದು ಜನ ಅರ್ಚಕರಿಂದ ಗಣೇಶನಿಗೆ ಒಂದು ಗಂಟೆ ಗಳಕಾಲ ಗಂಗಾ ಆರತಿ(Ganga aarati) ಮಾಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಅಭಿನವ ಶ್ರೀ ಅವಧೂತ ಸಿದ್ಧ ಮಹಾರಾಜರು ಅರಿಕೆರಿಗುಡ್ಡ ವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಸಾವಿರಾರು ಭಕ್ತರು ಉಪಸ್ಥಿತರಿದ್ದರು. ಗಂಗಾ ಆರತಿ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಸುಮಾರು ಒಂದು ಗಂಟೆಗಳ ಕಾಲ ಗಣೇಶನಿಗೆ ಗಂಗಾ ಆರತಿ ಮೂಲಕ ಪೂಜೆ ಸಲ್ಲಿಸಲಾಯಿತು. ಇದನ್ನು ಭಕ್ತರು ಕಣ್ತುಂಬಿಕೊಂಡರು.