ಪ್ರಜಾಸ್ತ್ರ ಸುದ್ದಿ
ಗಂಗಾವತಿ(Gangavati): ರಸ್ತೆ ಬದಿಯಲ್ಲಿನ 12 ಡಬ್ಬಾ ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಅಂಜನಾದ್ರಿ ಬೆಟ್ಟದ ಮುಖ್ಯರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಸೋಮವಾರ ಮುಂಜಾನೆ ಅಂಗಡಿ ತೆರೆಯಲು ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ನಗದು ಹಾಗೂ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ್ದಾರೆ.
ಒಟ್ಟು 12 ಅಂಗಡಿಗಳ ಕಳ್ಳತನವಾಗಿದೆ 12 ಸಾವಿರ ರೂಪಾಯಿ ನಗದು, 70 ಕೇಸರಿ ಶಾಲು ಹಾಗೂ ಇತರೆ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ ಎಂದು ಹೇಳಿದ್ದಾರೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ. ಸಣ್ಣ ಅನಾಹುತ ನಡೆದರೂ ನಮಗೆ ತೊಂದರೆಯಾಗಲಿದೆ ಎನ್ನುತ್ತಿದ್ದಾರೆ. ಸ್ಥಳಕ್ಕೆ ಗಸ್ತು ಪೊಲೀಸ್ ಪಡೆಯವರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.