ಪ್ರಜಾಸ್ತ್ರ ಸುದ್ದಿ
ಗೌರಿಬಿದನೂರು(Gouribidanoru): ಗಾಂಧಿವಾದಿ ಹೆಚ್.ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಹೊಸೂರು ಗ್ರಾಮಕ್ಕೆ ಇಂದು (ಭಾನುವಾರ) ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ದಿಢೀರ್ ರದ್ದಾಗಿದೆ. ಜಿಲ್ಲಾಡಳಿತದಿಂದ ಮುಖ್ಯಮಂತ್ರಿಗಳಾಗಿ ಹೆಲಿಪ್ಯಾಡ್ ನಿರ್ಮಿಸಿ ಅಧಿಕಾರಿಗಳು ಕಾಯುತ್ತಿದ್ದರು. ಆದರೆ, ಮುಖ್ಯಮಂತ್ರಿಗಳು ಬರುವುದಿಲ್ಲವೆಂದು ತಿಳಿದ ಬಳಿಕ ಅಲ್ಲಿಂದ ಅಧಿಕಾರಿಗಳು ತೆರಳಿದ್ದಾರೆ.
ಹೆಚ್.ನರಸಿಂಹಯ್ಯ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಬೇಕಿತ್ತು. ಬೆಳಗ್ಗೆ 10 ಗಂಟೆಕ್ಕೆ ಬೆಂಗಳೂರಿನಿಂದ ಸೀದಾ ಗೌರಿಬಿದನೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಬೇಕಿತ್ತು. ಇಲ್ಲಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದರು. ಆದರೆ, ಸಿಎಂ ಬರುವುದಿಲ್ಲ ಎನ್ನವ ಮಾಹಿತಿ ಕೊನೆಯ ಕ್ಷಣದಲ್ಲಿ ಬಂದಿದೆ. ಈ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.