ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ರಿಸರ್ವ್ ಬ್ಯಾಂಕ್ ಇಂಡಿಯಾ(RBI) ಶುಕ್ರವಾರ ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದೆ. ಆರ್ ಬಿಐ ಗರ್ವನರ್ ಶಕ್ತಿಕಾಂತ್ ದಾಸ್ ಮಾತನಾಡಿ, ಜಿಡಿಪಿ ಬೆಳವಣಿಗೆ ಮುನ್ಸೂಚನೆಯಾದ ಶೇಕಡ 7.2 ಬದಲು ಶೇಕಡ 6.6ಕ್ಕೆ ಕುಗ್ಗಿದೆ. ಬಡ್ಡಿದರವನ್ನು ಯಥಾಸ್ಥಿತಿಗೆ ಕಾಯ್ದುಕೊಂಡಿದೆ. 11ನೇ ಬಾರಿಗೆ ನೀತಿ ದರ ಬದಲಿಸಲಾಗಿದೆ. ರೆಪೊ ದರ ಶೇಕಡ 6.5 ಮೂಲಕ ಯಥಾಸ್ಥಿತಿ ಉಳಿಸಿಕೊಳ್ಳಲಾಗಿದೆ ಎಂದಿದ್ದಾರೆ.
ತಟಸ್ಥ ಹಣಕಾಸು ನೀತಿಯ ನಿಲುವು ಮುಂದುವರಿಕೆ, ರೆಪೊ ದರ ಶೇಕಡ 6.5 ಬಡ್ಡಿದರ ಮುಂದುವರಿಕೆ, ಜುಲೈ-ಸೆಪ್ಟೆಂಬರ್ ವರೆಗೆ ಜಿಡಿಪಿ ಶೇಕಡ 5.4 ಇದ್ದು ನಿರೀಕ್ಷೆಗಿಂತ ಕಡಿಮೆಯಾಗಿದೆ. 2025ರ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಮುನ್ಸೂಚನೆಯನ್ನು ಶೇಕಡ 4.8ಕ್ಕೆ ಹೆಚ್ಚಿಸಲಾಗಿದೆ. ನಗದು ಮೀಸಲು ಅನುಪಾತ ಶೇಕಡ 4.5 ರಿಂದ ಶೇಕಡ 4ಕ್ಕೆ ಇಳಿಸಲಾಗಿದೆ ಎನ್ನುವುದು ಸೇರಿ ಹಲವು ಘೋಷಣೆಗಳನ್ನು ಮಾಡಿದ್ದಾರೆ.