ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸೂಪರ್ ಸಿನಿಮಾ ಬಳಿಕ ಉಪೇಂದ್ರ ನಿರ್ದೇಶನ ಹಾಗೂ ನಟನೆಯ ಯುಐ ಸಿನಿಮಾ ಶುಕ್ರವಾರ ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಮುಂಜಾನೆಯಿಂದಲೇ ಶೋಗಳು ಶುರುವಾಗಿವೆ. ಉಪ್ಪಿ ಅಭಿಮಾನಿಗಳು ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸಿನಿ ಪ್ರಿಯರು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಹೇಳ್ತಿರುವುದು ನಮ್ಮ ರಾಜಕೀಯ ವ್ಯವಸ್ಥೆ ಬಗ್ಗೆ ಚಾಟಿ ಬೀಸುವ ಕೆಲಸ ಮಾಡಿದ್ದಾರೆ ಎನ್ನುವುದು. ಕೆಲವರು ಓಪನ್ ಆಗಿ ಇದು ಪ್ರಜಾಕೀಯ ಪ್ರಮೋಷನ್ ಎಂದು ಹೇಳಿದ್ದಾರೆ.
ನೂರಾರು ವರ್ಷಗಳ ನಮ್ಮ ದೇಶ ಆಳಿದ ಮೊಗಲರು, ಬ್ರಿಟಿಷ್ ರಿಗಿಂತ ಈಗ ನಮ್ಮನ್ನು ಆಳುವ ರಾಜಕೀಯದವರು ಎಷ್ಟೊಂದು, ಹೇಗೆಲ್ಲ ಲೂಟಿ ಹೊಡೆಯುತ್ತಿರುವುದನ್ನು ತುಂಬಾ ಅದ್ಭುತವಾಗಿ ತೋರಿಸಿದ್ದಾರೆ. ಇದಕ್ಕೆ ಜನರು ಹೇಗೆ ಉತ್ತರ ಕೊಡಬೇಕು. ಜನರು ಹೇಗೆ ಬದಲಾಗಬೇಕು. ನಾವು ಬದಲಾವಣೆ ಆದಾಗ ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ಜಾತಿ, ಧರ್ಮ ಎಂದು ಹೊಡೆದಾಡುವುದು ಬಿಡಬೇಕು ಎನ್ನುವ ಸಂದೇಶ ಹೇಳಿದ್ದಾರೆ ಎಂದು ಸಿನಿಮಾ ನೋಡಿದ ಪ್ರೇಕ್ಷಕರ ಮಾತುಗಳಾಗಿವೆ.
ಸಿನಿಮಾ ಆರಂಭದಲ್ಲಿಯೇ ನೀವು ದಡ್ಡರಾಗಿದ್ರೆ ಈ ಚಿತ್ರ ಪೂರ್ತಿ ನೋಡಿ… ನೀವು ಬುದ್ದಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ… ಎನ್ನುವ ಸಾಲುಗಳು ಬರುವ ಮೂಲಕ ಎಂದಿನಂತೆ ತಮ್ಮ ಶೈಲಿಯನ್ನು ಮುಂದುವರೆಸಿದ್ದಾರೆ. ಉಪೇಂದ್ರ ಸಿನಿಮಾಗಳು ಅಂದರೆ ತಲೆಯಲ್ಲಿ ಹುಳ ಬಿಡುವ ಕೆಲಸ ಎಂದು ಪ್ರತಿಯೊಬ್ಬರು ಹೇಳುತ್ತಾರೆ. ಇಲ್ಲಿ ಅದನ್ನೇ ಮಾಡುವ ಮೂಲಕ ಈ ಹಿಂದೆ ಅವರ ನಿರ್ದೇಶನದಲ್ಲಿ ರಾಜಕೀಯ ವ್ಯವಸ್ಥೆಯನ್ನು ಯಾವ ರೀತಿ ಹೇಳುವ ಪ್ರಯತ್ನ ಮಾಡಿದ್ದಾರೋ ಅದನ್ನೇ ಇಲ್ಲಿಯೂ ಹೇಳಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಲು ಇನ್ನು 10 ವರ್ಷ ಬೇಕು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಉಪ್ಪಿ ಅಭಿಮಾನಿಗಳು ಸಿನಿಮಾ ಮೆಚ್ಚಿಕೊಂಡಿದ್ದಾರೆ.