ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಈ ಭಾಗದ ಪ್ರಸಿದ್ಧ ದೇವಸ್ಥಾನಗಳಲ್ಲಿ ಘತ್ತರಗಿ ಭಾಗ್ಯವಂತಿ ದೇವಸ್ಥಾನವೂ ಒಂದು. ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದಲ್ಲಿ ಪ್ರಸಿದ್ಧ ಭಾಗ್ಯವಂತಿದೇವಿಯ ದೇವಸ್ಥಾನವಿದೆ. ಜಿಲ್ಲೆ ಮಾತ್ರವಲ್ಲ ನೆರೆಯ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯದಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ. ತಮ್ಮ ಇಷ್ಟಾರ್ಥಗಳನ್ನು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಹುಂಡಿಯಲ್ಲಿ ಹಣ, ಬೆಳ್ಳಿ, ಚಿನ್ನ ಹಾಕುತ್ತಾರೆ. ಹೀಗೆ ಹಾಕಿದ ಹಣದ ಮೇಲೆ ಬರೆದ ಬರಹ ಈಗ ಸಾಕಷ್ಟು ವೈರಲ್ ಆಗಿದೆ.
ಪ್ರತಿ ವರ್ಷದಂತೆ ಕಾಣಿಕೆ ಹುಂಡಿ ತೆಗೆದು ಎಣಿಕೆ ಮಾಡಲಾಗಿದೆ. ಅದರಲ್ಲಿ 20 ರೂಪಾಯಿ ನೋಟಿನ ಮೇಲೆ ‘ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು ತಾಯೆ’ ಎಂದು ಬರೆಯಲಾಗಿದೆ. ಇದನ್ನು ನೋಡಿದವರು ಹಲವು ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ತಾಯಿ, ಮಗಳಂತೆ ಇರಬೇಕಾದ ಅತ್ತೆ, ಸೊಸೆ ನಡುವೆ ಇತ್ತೀಚಿನ ದಿನಗಳಲ್ಲಿ ಬಿರುಕು ಹೆಚ್ಚಾಗುತ್ತಿದೆ. ದೇವರಲ್ಲಿ ಇನ್ನು ಏನೇನು ಬೇಡಿಕೊಳ್ಳುತ್ತಾರೋ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.