ಪ್ರಜಾಸ್ತ್ರ ಸುದ್ದಿ
ಅಹಮದಾಬಾದ್(Ahmedabad): ಇಲ್ಲಿನ ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ಮಾಡಿದೆ. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಶ್ ಬಟ್ಲರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 1 ರನ್ ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಆದರೆ, ಮುಂದೆ ಶುಭನಂ ಗಿಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಭರ್ಜರಿ ಬ್ಯಾಟಿಂಗ್ ಮಾಡಿತು. 122 ರನ್ ಗಳ ಕಾಣೆಕೆ ನೀಡಿತು.
ಶುಭನಂ ಗಿಲ್ 112, ವಿರಾಟ್ ಕೊಹ್ಲಿ 52, ಶ್ರೇಯಸ್ ಅಯ್ಯರ್ 78 ರನ್ ಗಳನ್ನು ಬಾರಿಸುವ ಮೂಲಕ ಇಂಗ್ಲೆಂಡ್ ಬೌಲರ್ ಗಳನ್ನು ಬೆನ್ನು ಹತ್ತಿದರು. ಕೆ.ಎಲ್ ರಾಹುಲ್ 40 ರನ್ ಬಾರಿಸಿ ತಂಡದ ರನ್ 356 ರನ್ ಬಾರಿಸುವ ಮೂಲಕ 350ರ ಗಡಿ ದಾಟುವಲ್ಲಿ ಆಸರೆಯಾದರು. ಅಲ್ಲಿಗೆ 50 ಓವರ್ ಗಳಲ್ಲಿ 356 ರನ್ ಗಳಿಗೆ ಆಲೌಟ್ ಆದರು. ಅದಿಲ್ ರಶಿದ್ 4 ವಿಕೆಟ್ ಪಡೆದು ಮಿಂಚಿದರು. ಮಾರ್ಕ್ ವುಡ್ 2, ಶಕಿಬ್ ಮೊಹಮ್ಮದ್ ಜೊ ರೂಟ್ ತಲಾ 1 ವಿಕೆಟ್ ಪಡೆದರು. ಬಿಗ್ ಸ್ಕೋರ್ ಚೇಸ್ ಮಾಡುತ್ತಿರುವ ಇಂಗ್ಲೆಂಡ್ 24.1 ಓವರ್ ಗಳಲ್ಲಿ 25 ಓವರ್ ಗಳಲ್ಲಿ 154 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದೆ.