ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪಾಕಿಸ್ತಾನ್ ಯಾವಾಗಲೂ ನಮ್ಮ ಶತ್ರು ದೇಶ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನನಗೆ ಆತ್ಮಹುತಿ ಬಾಂಬ್ ಕೊಡಲಿ. ನಾನು ಪಾಕಿಸ್ತಾನಕ್ಕೆ ಯುದ್ಧಕ್ಕೆ ಹೋಗುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅವರು, ಪಹಲ್ಗಾಮ್ ದಾಳಿ ಅತ್ಯಂತ ಹೇಯ ಹಾಗೂ ಅಮಾನವೀಯ ಕೃತ್ಯವೆಂದು ಖಂಡಿಸಿದ್ದಾರೆ.
ನಾವು ಭಾರತೀಯರು, ಹಿಂದೂಸ್ತಾನಿಗಳು. ಪಾಕಿಸ್ತಾನಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಆತ್ಮಹುತಿ ಬಾಂಬ್ ನನ್ನ ದೇಹಕ್ಕೆ ಕಟ್ಟಿಕೊಂಡು ಯುದ್ಧಕ್ಕೆ ಹೋಗುತ್ತೇನೆ. ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತೇನೆ ಎಂದಿದ್ದಾರೆ. ಯುದ್ಧಕ್ಕೆ ಮಾಡಕ್ಕೆ ಸಿದ್ಧವೆಂದರೆ ನಾನು ಸಿದ್ಧ. ಅಲ್ಲಾ ಮೇಲೆ ಆಣೆ ಬಾಂಬ್ ಕಟ್ಟಿಕೊಂಡು ನಾನು ಯುದ್ಧಕ್ಕೆ ಹೋಗುತ್ತೇನೆ ಎಂದು ಅಲ್ಪಸಂಖ್ಯಾತರ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.