ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿಯಲ್ಲಿ ಚಿನ್ನದ ಅಂಗಡಿಯನ್ನು ದರೋಡೆ ಮಾಡಲಾಗಿದೆ. ಸೋಮವಾರ ಸಂಜೆ ಈ ಒಂದು ಘಟನೆ ನಡೆದಿದ್ದು, ಕಂಟ್ರಿ ಪಿಸ್ತೂಲ್ ತೋರಿಸಿ 205 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ದರೋಡೆ ಮಾಡಿ ಪರಾರಿಯಾಗಿದ್ದಾರೆ. ಇದೆ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ವಿದ್ಯಾರ್ಥಿಯೊಬ್ಬರ ಕಾಲಿಗೆ ತಗುಲಿದೆ.
ಆತ್ಮಲಿಂಗ ಹೂಗಾರ(18) ಅನ್ನೋ ವಿದ್ಯಾರ್ಥಿ ಈ ವೇಳೆ ಗಾಯಗೊಂಡಿದ್ದಾನೆ. ಹಲಸಂಗಿ ಮುಖ್ಯರಸ್ತೆಯಲ್ಲಿರುವ ಭೂಮಿಕಾ ಜ್ಯುವೆಲ್ಲರಿ ಶಾಪ್ ಗೆ ಇಬ್ಬರು ದುಷ್ಕರ್ಮಿಗಳು ನುಗ್ಗಿ ಪಿಸ್ತೂಲ್ ತೋರಿಸಿ ಚಿನ್ನ ಹಾಗೂ ಬೆಳ್ಳಿ ದರೋಡೆ ಮಾಡಿದ್ದಾರೆ. ಇದನ್ನು ಮೊಬೈಲ್ ನಲ್ಲಿ ವ್ಯಕ್ತಿಯೊಬ್ಬರು ಸೆರೆ ಹಿಡಿಯುತ್ತಿದ್ದಾಗ ಗುಂಡು ಹಾರಿಸಿದ್ದು, ಅದು ವಿದ್ಯಾರ್ಥಿಯ ಕಾಲಿಗೆ ತಗುಲಿದೆ. ಮಹಾರುದ್ರ ಕಂಚಾಗಾರ ಎಂಬುವರಿಗೆ ಸೇರಿದ ಅಂಗಡಿ ದರೋಡೆ ಮಾಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.




