ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಜಿಲ್ಲೆಯ ಹುಣಸೂರ ನಗರದಲ್ಲಿ ಚಿನ್ನದ ಅಂಗಡಿಗೆ ನುಗ್ಗಿದ ಐವರು ದರೋಡೆಕೋರರು ಕೆಜಿಗಟ್ಟಲ್ಲೇ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಸ್ಕೈ ಗೋಲ್ಡ್ ಅಂಡ್ ಡೈಮೆಂಡ್ಸ್ ಅಂಗಡಿಗೆ ನುಗ್ಗಿ, ಗನ್ ತೋರಿಸಿ ಅಲ್ಲಿನ ಸಿಬ್ಬಂದಿಗೆ ಹೆದರಿಸಿದ್ದಾರೆ. ಇಬ್ಬರು ಚೀಲದಲ್ಲಿ ಚಿನ್ನಾಭರಣ ಹಾಗೂ ವಜ್ರದ ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಇಬ್ಬರು ಗನ್ ಹಿಡಿದುಕೊಂಡು ಸಿಬ್ಬಂದಿಯನ್ನು ಅಂಜಿಸಿದ್ದಾರೆ. ಇಬ್ಬರು ಚೀಲದಲ್ಲಿ ಆಭರಣಗಳನ್ನು ತುಂಬಿಕೊಂಡಿದ್ದಾರೆ. ಓರ್ವ ಬಾಗಿಲು ಬಳಿ ನಿಂತಿದ್ದಾನೆ. 4 ನಿಮಿಷದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಭರಣ ದೋಚಿ, ಎರಡು ಬೈಕ್ ನಲ್ಲಿ ಕೆ.ಆರ್ ನಗರ ಕಡೆ ಹೋಗಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿವೆ.




