ಪ್ರಜಾಸ್ತ್ರ ಸುದ್ದಿ
ತಿರುವನಂತಪುರ(thiruvananthapuram): ಶಬರಮಲೆ ದೇವಸ್ಥಾನದಲ್ಲಿ ಚಿನ್ನ ಲೇಪಿತ ತಾಮ್ರದ ದ್ವಾರಪಾಲಕರ ಮೂರ್ತಿಗಳಲ್ಲಿನ ಬಂಗಾರದ ತೂಕ ಕಡಿಮೆಯಾಗಿದೆ ಅನ್ನೋ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಆರೋಪಿ ಉಣ್ಣಿಕೃಷ್ಣನ್ ಪೋಟಿಯನ್ನು ಶುಕ್ರವಾರ ಬಂಧಿಸಿದ್ದಾರೆ. ಬೆಂಗಳೂರು ಮೂಲದ ಉದ್ಯಮಿಯನ್ನು ಗುರುವಾರ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿತ್ತು. ಇಂದು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದೆ.
ಆರೋಪಿ ಉಣ್ಣಿಕೃಷ್ಣ್ ಎಂಬಾತನನ್ನು ಪತ್ತನಂತಿಟ್ಟದ ನ್ಯಾಯಾಲಯಕ್ಕೆ ಶುಕ್ರವಾರ ಮಧ್ಯಾಹ್ನ ಹಾಜರು ಪಡಿಸಲಾಗುತ್ತಿದೆ. ಬಳಿಕ ಕಸ್ಟಡಿಗೆ ಒಪ್ಪಿಸುವಂತೆ ಎಸ್ಐಟಿ ಕೋರ್ಟ್ ಗೆ ಮನವಿ ಮಾಡಿಕೊಳ್ಳಲಿದೆ. ಇದರ ತನಿಖೆಯನ್ನು ಆರು ವಾರಗಳಲ್ಲಿ ಪೂರ್ಣಗೊಳಿಸಲು ಕೇರಳ ಹೈಕೋರ್ಟ್ ಸೂಚನೆ ನೀಡಿದೆ.