ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ದೆಹಲಿಯಲ್ಲಿರುವ ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರಿಸುವ ಪ್ರಕರಣಕ್ಕೆ ಸಂಬಂಧಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ, ಶ್ವಾನ ಪ್ರಿಯರಿಗೆ ಶುಭ ಸುದ್ದಿ ನೀಡಿದೆ. ಸೋಂಕಿಗೆ ಒಳಗಾದ, ಆಕ್ರಮಣಕಾರಿ ನಾಯಿಗಳನ್ನು ಹೊರತುಪಡಿಸಿ ಉಳಿದವುಗಳಿಗೆ ಲಸಿಕೆ, ಸಂತಾನಹರಣದ ಬಳಿಕ ಮರಳಿ ಅದೇ ಸ್ಥಳಕ್ಕೆ ಬಿಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆಗಸ್ಟ್ 11ಕ್ಕೆ ನೀಡಿದ್ದ ಆದೇಶಕ್ಕೆ ತಿದ್ದುಪಡಿ ಮಾಡಿದೆ. ಸಂತಾನಹರಣ, ರೋಗ ನಿರೋಧಕ ಚುಚ್ಚುಮದ್ದು ನೀಡಿದ ಬಳಿಕ ಅವುಗಳ ಮೂಲ ಸ್ಥಳಕ್ಕೆ ಬಿಡಬೇಕು. ಸಾರ್ವಜನಿಕವಾಗಿ ಆಹಾರ ಹಾಕುವ ವಿಚಾರದಲ್ಲಿಯೂ ಕೆಲವೊಂದಿಷ್ಟು ನಿರ್ದೇಶನಗಳನ್ನು ನೀಡಿದೆ. ರೇಬಿಸ್ ರೋಗ, ಸಾರ್ವಜನಿಕರ ಮೇಲೆ ದಾಳಿಯ ಸಂಬಂಧ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.