ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಇಂಡಿಯನ್ ಕ್ರಿಕೆಟ್ ಟೀಂ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಏಕದಿನ ತಂಡದಲ್ಲಿ ಮಾತ್ರ ಮುಂದುವರೆಯಲಿದ್ದಾರೆ. ಈಗಾಗ್ಲೇ ಟಿ-20 ಮಾದರಿ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷದ ರೋಹಿತ್ ಶರ್ಮಾ ಬಳಿಕ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಯಾರು ನಾಯಕರು ಅನ್ನೋ ಪ್ರಶ್ನೆಗೆ ಶೀಘ್ರದಲ್ಲಿ ಉತ್ತರ ಸಿಗಲಿದೆ.
67 ಟೆಸ್ಟ್ ಪಂದ್ಯಗಳಲ್ಲಿ 12 ಶತಕ, 18 ಅರ್ಧ ಶತಕ ಗಳಿಸಿದ್ದಾರೆ. 40.57 ಸರಾಸರಿಯಲ್ಲಿ 4,301 ರನ್ ಗಳನ್ನು ರೋಹಿತ್ ಶರ್ಮಾ ಬಾರಿಸಿದ್ದಾರೆ. ಟಿ-20 ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟಿಗೆ ವಿದಾಯ ಹೇಳಿದರು. ಈಗ ಟೆಸ್ಟ್ ಆಟಕ್ಕೆ ಗುಡ್ ಬೈ ಹೇಳಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪ್ರತಿನಿಧಿಸುತ್ತಿದ್ದಾರೆ.