ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಟೆಕ್ನಾಲಜಿ ಬೆಳೆದಂತೆ ಇವತ್ತು ಎಲ್ಲವೂ ಸರಳವಾಗುತ್ತಿದೆ. ಆದರೆ, ಅದನ್ನು ಅತಿಯಾಗಿ ನಂಬಿ ಕೆಲವೊಮ್ಮೆ ಅನಾಹುತಗಳು ಸೃಷ್ಟಿಯಾಗುತ್ತಿವೆ. ಅದರಲ್ಲಿ ಗೂಗಲ್ ಮ್ಯಾಪ್ ನಂಬಿ ಆಗುತ್ತಿರುವ ಅಪಘಾತಗಳು. ಇದೇ ರೀತಿ ಶುಕ್ರವಾರ ಬೆಳಗಿನ ಜಾವ ಇಂತಹದೊಂದು ದುರಂತ ನಡೆದಿದೆ. ಕಾರು ಅಪಘಾತದಲ್ಲಿ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹತ್ತಿರದ ರಾಷ್ಟ್ರೀಯ ಹೆದ್ದಾರಿ 648ರಲ್ಲಿ ನಡೆದಿದೆ. ರಸ್ತೆ ಪಕ್ಕದಲ್ಲಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ ಹೊಡೆದಿದೆ.
ಹೈದ್ರಾಬಾದ್ ಮೂಲದ ವೈದ್ಯ ಅಮರ್ ಪ್ರಸಾದ್ ಎನ್ನುವರ ಮೃತಪಟ್ಟಿದ್ದಾರೆ. ಪ್ರವಳಿಕಾ, ವೇಣು ಎನ್ನುವವರು ಗಾಯಗೊಂಡಿದ್ದಾರೆ. ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ಹೋಗಲು ಬೆಳಗಿನ ಜಾವ 2 ಗಂಟೆಗೆ ಹೈದ್ರಾಬಾದ್ ನಿಂದ ಹೊರಟಿದ್ದರು. ದೇವನಹಳ್ಳಿಯ ಮೂಲಕ ಹೊಸಕೋಟೆ ಮೂಲಕ ಕಾರು ಹೊರಟಿತ್ತು. ಕೋಲಾರದ ಹೆದ್ದಾರಿ ಹತ್ತಿರ ಯುಟರ್ನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಚಾಲಕ ಗೂಗಲ್ ಮ್ಯಾಪ್ ನತ್ತ ಹೆಚ್ಚು ಗಮನ ಹರಿಸಿದ. ಇದರಿಂದಾಗಿ ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ.