ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಹಿಂದೂ ಧರ್ಮ ಹಾಗೂ ದೇವಸ್ಥಾನಗಳ ವಿರುದ್ಧ ಅಪಪ್ರಚಾರ ಮಾಡುವುದಕ್ಕೆ ಕಮ್ಯೂನಿಸ್ಟ್ ಮನಸ್ಥಿತಿ ಹೊಂದಿರುವ ನಗರ ನಕ್ಸಲರಿಗೆ ಸರ್ಕಾರ ಬೆಂಬಲ ನೀಡುತ್ತಿದೆ. ಧರ್ಮಸ್ಥಳದ ಪ್ರಕರಣದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರವಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಭಾನುವಾರ ಮಾತನಾಡಿದ ಅವರು, ಸೌಜನ್ಯ ಪ್ರಕರಣ, ಎಸ್ಐಟಿ ತನಿಖೆಯನ್ನು ನಾವು ಯಾರೂ ವಿರೋಧಿಸಿಲ್ಲ. ನಮಗೆ ವಿರೇಂದ್ರ ಹೆಗ್ಗಡೆ ಮುಖ್ಯ ಎನ್ನುವುದಕ್ಕಿಂತ ಧರ್ಮಸ್ಥಳ, ಮಂಜುನಾಥಸ್ವಾಮಿ ಮುಖ್ಯ. ಈ ಪ್ರಕರಣದ ಹಿಂದೆ ಸರ್ಕಾರವಿದೆ. ಕಮ್ಯೂನಿಸ್ಟ್ ನಕ್ಸಲ್ ಗಳನ್ನು ರೆಡ್ ಕಾರ್ಪೆಟ್ ಹಾಸಿ ನಾಡಿಗೆ ಕರೆಸಿಕೊಂಡ ಸಿದ್ದರಾಮಯ್ಯನರೆ ಇದಕ್ಕೆ ಕಾರಣ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೆ ಇದರ ಹಿಂದೆ ಷಡ್ಯಂತ್ರ ನಡೆದಿದೆ ಎಂದಿದ್ದಾರೆ. ಆದರೆ, ಮುಖ್ಯಮಂತ್ರಿ ಮಾತ್ರ ಯಾವ ಹೇಳಿಕೆ ನೀಡುತ್ತಿಲ್ಲವೆಂದು ಕಿಡಿ ಕಾರಿದರು.