ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಆಸಂಗಿಹಾಳ ಗ್ರಾಮದ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 22, ಮಂಗಳವಾರದಂದು ಪಲ್ಲಕ್ಕಿ ಉತ್ಸವ ನಡೆಯಲಿದೆ. ಬಳಗಾನೂರ ಗ್ರಾಮದ ಶ್ರೀ ಕೇದಾರಲಿಂಗ ದೇವರ ಪಲ್ಲಕ್ಕಿ, ಮದರಿ ಗ್ರಾಮದ ಶ್ರೀ ಲಕ್ಷ್ಮೀ ದೇವಿಯ ಪಲ್ಲಕ್ಕಿ, ಮಂಗಳೂರು ಗ್ರಾಮದ ಮಾರಾಯ ದೇವರ ಪಲ್ಲಕ್ಕಿ, ಗುಂದಗಿ ಗ್ರಾಮದ ರೆಬಕಮ್ಮ ತಾಯಿಯ ಪಲ್ಲಕ್ಕಿಗಳು ಆಸಂಗಿಹಾಳ ಗ್ರಾಮಕ್ಕೆ ಆಗಮನಿಸುತ್ತವೆ.
ಹೀಗೆ ಬೇರೆ ಬೇರೆ ಗ್ರಾಮದ ದೇವರ ಪಲ್ಲಕ್ಕಿಗಳು ಇಲ್ಲಿಗೆ ಬಂದು ಅದ್ಧೂರಿಯಾದ ಪಲ್ಲಕ್ಕಿ ಉತ್ಸವ ನಡೆಯಲಿದೆ. ಇದರ ಜೊತೆಗೆ ಬುಧವಾರ ಸಾಯಂಕಾಲ ಡೊಳ್ಳಿನ ಪದ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗಾಗಿ ಪಲ್ಲಕ್ಕಿ ಉತ್ಸವ ಹಾಗೂ ಡೊಳ್ಳಿನ ಕಾರ್ಯಕ್ರಮಗಳಿಗೆ ಸುತ್ತಮುತ್ತಲಿನ ಭಕ್ತಾದಿಗಳಿಗಳು ಭಾಗವಹಿಸಬೇಕೆಂದು ಜಾತ್ರಾ ಮಹೋತ್ಸವ ಕಮಿಟಿಯವರು ವಿನಂತಿಸಿದ್ದಾರೆ.