ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ನವರಾತ್ರಿ ಹಬ್ಬದ ನಿಮಿತ್ತ ನಡೆಯುವ ನಾಡಿದೇವಿಯ ಹಬ್ಬವು ತಾಲೂಕಿನ ಗುಬ್ಬೇವಾಡ ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿತು. ದೇವಿಯ ಭವ್ಯ ಮೆರವಣಿಗೆ ಗ್ರಾಮದ ಶ್ರೀ ಅಡವೇಶ್ವರ ದೇವಸ್ಥಾನದಿಂದ ಶುರುವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ವಿವಿಧ ಕಲಾತಂಡಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಸಾರವಾಡದ ಶಕ್ತಿ ಗೊಂಬೆ ಕುಣಿತ, ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಯುವಕರ ಡಿಜೆ ಕುಣಿತ ವಿಶೇಷವಾಗಿತ್ತು. ನಾಡದೇವಿ ಪ್ರತಿಷ್ಠಾಪನೆ ನಂತರ ಸತತ 9 ದಿನಗಳ ಕಾಲ ಕಲಬುರಗಿಯ ಶ್ರೀ ಸಿದ್ಧಾರೂಢ ಮಠದ ಪರಮ ಪೂಜ್ಯ ಮಾತೋಶ್ರೀ ಚೇತನಾ ತಾಯಿ ಅವರಿಂದ ಪ್ರಚನ ಕಾರ್ಯಕ್ರಮ ಸಂಜೆ 7.30ಕ್ಕೆ ನಡೆಯಲಿದೆ. ರಾತ್ರಿ 10 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಳೆದ 16 ವರ್ಷಗಳಿಂದ ಈ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ ಎಂದು ಶ್ರೀ ನಾಡದೇವಿ ಉತ್ಸವ ಸಮಿತಿಯವರು ತಿಳಿಸಿದ್ದಾರೆ.