ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಭಾರಿ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ರೈತರ ಬೆಳೆದ ವಿವಿಧ ಬೆಳೆಗಳು ಸಂಪೂರ್ಣ ಹಾಳಾಗಿವೆ. ಬುಧವಾರ ಸಂಜೆ ಸುರಿದ ಮಳೆಗೆ ದ್ರಾಕ್ಷಿ ಹಾಗೂ ಪಪ್ಪಾಯಿ ಹಾಳಾಗಿದ್ದು, ರೈತರು ಕಂಗಾಲಾಗಿದ್ದಾರೆ. ಢವಳಗಿ, ರೂಢಗಿ, ಅಗಸಬಾಳ ಸೇರಿದಂತೆ ವಿವಿಧ ಕಡೆ ಬುಧವಾರ ಸಂಜೆ ಭಾರಿ ಬಿರುಗಾಳಿ ಸಮೇತ ಮಳೆಯಾಗಿದೆ.
ರೈತ ಶಿವಾನಂದ ಬಿರಾದಾರ ಎಂಬುವರ 6 ಎಕರೆ ಹೊಲದಲ್ಲಿ ಹಾಕಿದ್ದ ದ್ರಾಕ್ಷಿ ಹಾಳಾಗಿದೆ. ಇನ್ನು ಕೆ.ವೈ ಬಿರಾದಾರ ಎಂಬುವರ 4 ಎಕರೆ ಹೊಲದಲ್ಲಿನ ಪಪ್ಪಾಯಿ ಹಾನಿಯಾಗಿದೆ. ಇದರಿಂದಾಗಿ ರೈತರು ಸಾಕಷ್ಟು ಹಾನಿ ಅನುಭವಿಸಿದ್ದಾರೆ. ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿದೆ.