Ad imageAd image

ಒಳಮೀಸಲಾತಿಗೆ ಸುಪ್ರೀಂನಿಂದ ಗ್ರೀನ್ ಸಿಗ್ನಲ್, ಸಿಎಂ ಏನಂದರು?

ಪರಿಶಿಷ್ಟ ಸಮುದಾಯದಲ್ಲಿ ಅತಿಹಿಂದುಳಿದವರನ್ನು ಗುರುತಿಸಿ ನೀಡುವ ಒಳಮೀಸಲಾತಿಯ ಕುರಿತಂತೆ ರಾಜ್ಯ ಸರ್ಕಾರಗಳ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಕೋರ್ಟ್ ತೀರ್ಪಿನಿಂದಾಗಿ ರಾಜ್ಯ

Nagesh Talawar
ಒಳಮೀಸಲಾತಿಗೆ ಸುಪ್ರೀಂನಿಂದ ಗ್ರೀನ್ ಸಿಗ್ನಲ್, ಸಿಎಂ ಏನಂದರು?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಪರಿಶಿಷ್ಟ ಸಮುದಾಯದಲ್ಲಿ(Backwords) ಅತಿಹಿಂದುಳಿದವರನ್ನು ಗುರುತಿಸಿ ನೀಡುವ ಒಳಮೀಸಲಾತಿಯ ಕುರಿತಂತೆ ರಾಜ್ಯ ಸರ್ಕಾರಗಳ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಕೋರ್ಟ್ ತೀರ್ಪಿನಿಂದಾಗಿ ರಾಜ್ಯ ಸರ್ಕಾರಗಳ ಅಧಿಕಾರವನ್ನು ಎತ್ತಿ ಹಿಡಿದಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುಪ್ರೀಂ ಕೋರ್ಟ್(Supreme Court) ತೀರ್ಪನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದಿದ್ದಾರೆ.

ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕಲ್ಪಿಸುವ ಬಗ್ಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ರಚಿಸಿದ್ದ ನ್ಯಾ.ಎ.ಜೆ ಸದಾಶಿವ(AJ Sadashiva) ಅವರ ಅಧ್ಯಕ್ಷತೆಯ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗೆ ಸರ್ಕಾರ ಬದ್ಧವಾಗಿದೆ. ನ್ಯಾ.ಎ.ಜೆ ಸದಾಶಿವ ಆಯೋಗದ ಶಿಫಾರಸುಗಳನ್ನು ಕೂಲಂಕುಷವಾಗಿ ಅಧ್ಯಯ ನಡೆಸಿ, ಅಗತ್ಯ ಬಿದ್ದರೆ ಇದಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಬೆಳೆವಣಿಗೆಳನ್ನು ಪರಿಗಣೆಗೆ ತೆಗೆದುಕೊಂಡು ಸಮಾಲೋಚನಾ-ಸಂಧಾನ ಮೂಲಕ ಒಳಮೀಸಲಾತಿ ಬಗ್ಗೆ ಸ್ಪಷ್ಟವಾದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್(mk stalin) ಮಾತನಾಡಿದ್ದು, ದಮನಿತ ವರ್ಗದವರಿಗೆ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿದೆ ಎನ್ನುವ ತೀರ್ಪು ಡಿಎಂಕೆಯ ದ್ರಾವಿಡ ಮಾದರಿಗೆ ಸಿಕ್ಕಿದ ಮಣೆಯಾಗಿದೆ ಎಂದಿದ್ದಾರೆ. ಒಳಮೀಸಲಾತಿಗೆ ಸಂಬಂಧಪಟ್ಟಂತೆ ಸಮಿತಿ ರಚಿಸಲಾಗುವುದು. ದತ್ತಾಂಶಗಳನ್ನು ಆಧರಿಸಿ ಅರುಂತಥಿಯಾರ್ ಸಮುದಾಯಕ್ಕೆ ಆಗಿನ ಸಿಎಂ ಕರುಣಾನಿಧಿ ಒಳಮೀಸಲಾತಿ ನೀಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article