ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಇತ್ತೀಚೆಗೆ ನಡೆದ ಜಿಎಸ್ ಟಿ ಸಭೆಯಲ್ಲಿ ಹಲವು ವಸ್ತುಗಳ ಮೇಲೆ ಜಿಎಸ್ ಟಿ ವಿಧಿಸುವ ವಿಚಾರ ಪ್ರಸ್ತಾಪವಾಗಿದೆ. ಸಿನಿಮಾ ಮಂದಿರಗಳಲ್ಲಿ ನೀಡುವ ಪಾಪ್ ಕಾರ್ನ್ ಗೂ ಮೂರು ಮಾದರಿಯಲ್ಲಿ ಜಿಎಸ್ ಟಿ ವಿಧಿಸಲು ಮುಂದಾಗಿದೆ ಎನ್ನುವ ವಿಚಾರಕ್ಕೆ ಕೇಂದ್ರ ಸರ್ಕಾರ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ರೋಲ್ ಗೆ ಗುರಿಯಾಗಿದ್ದಾರೆ. ಈಗ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲುವುದಕ್ಕೆ ಜೆಎಸ್ ಟಿ ವಿಧಿಸಲಾಗುತ್ತದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಉತ್ತರ ಪ್ರದೇಶದ ಲಖನೌ ಕಲ್ಯಾಣ್ ಸಿಂಗ್ ಕ್ಯಾನ್ಸರ್ ಇನ್ಸ್ ಟ್ಯೂಟ್ ಹೊರಡಿಸಿರುವ ಪ್ರಕಟಣೆಯಲ್ಲಿ ವೈರಲ್ ಆಗಿದೆ.
ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಶೇಕಡ 18ರಷ್ಟು ಜಿಎಸ್ ಟಿ ವಿಧಿಸಲಾಗುತ್ತಿದೆ ಎನ್ನುವ ವಿಚಾರ ಚರ್ಚೆಗೆ ಬಂದಿದೆ. ಏಕರೂಪ ಜಿಎಸ್ ಟಿ ದರ ನಿಗದಿ ದೇಶ್ಯಾದ್ಯಂತ ಜಾರಿ ಮಾಡಲಾಗುತ್ತಿದೆಯಂತೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಬಿಜೆಪಿ ಸರ್ಕಾರ ಪರೀಕ್ಷೆಯ ಅರ್ಜಿಗಳ ಮೇಲೂ ಜಿಎಸ್ ಟಿ ವಿಧಿಸಲು ಮುಂದಾಗಿದೆ. ಸರ್ಕಾರದಲ್ಲಿನ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತಿದೆ. ಇದಕ್ಕೆ ಶೇಕಡ 18ರಷ್ಟು ಜಿಎಸ್ ಟಿ ವಿಧಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.