ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳಬೇಕಾದ ಶಿಕ್ಷಕನೊಬ್ಬ ಮೃಗೀಯ ರೀತಿಯಲ್ಲಿ ವರ್ತಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಅಮಾನುಷ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಅತಿಥಿ ಶಿಕ್ಷಕ ಶಿವರಾಜ ಹಣಮಂತ(32) ಬಂಧಿತ ಆರೋಪಿಯಾಗಿದ್ದಾನೆ. ಇತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. 8ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ.
ಬಾಲಕಿ ತಾಯಿ ಯುಗಾದಿ ಹಬ್ಬಕ್ಕೆ ತನ್ನ ಮೂವರು ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದಾಳೆ. ಪರೀಕ್ಷೆಯ ಕಾರಣಕ್ಕೆ ಬಾಲಕಿ ಊರಿನಲ್ಲಿಯೇ ಉಳಿದುಕೊಂಡಿದ್ದಾಳೆ. ಅಜ್ಜಿಯ ಮನೆಗೆ ಹೋಗಿ ಸಂಜೆ ಮನೆಗೆ ಬಂದು ಸ್ನೇಹಿತೆಯರೊಂದಿಗೆ ಟಿವಿ ನೋಡುತ್ತಿದ್ದಳು. ಆಗ ಶಿವರಾಜ ಮನೆಗೆ ನುಗ್ಗಿದ್ದಾನೆ. ಗೆಳತಿಯರು ಹೆದರಿ ಓಡಿ ಹೋಗಿದ್ದಾರೆ. ಬಾಲಕಿ ಶಿಕ್ಷಕನನ್ನು ಪ್ರಶ್ನಿಸಿದ್ದಾಳೆ. ಆದರೆ, ಈತ ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿ, ಹೆದರಿಸಿ ಅತ್ಯಾಚಾರವೆಸಗಿದ್ದಾನೆ.
ಪ್ರಜ್ಞೆಯಿಲ್ಲದ ಬಿದ್ದಿದ್ದ ಬಾಲಕಿಯನ್ನು ಪೋಷಕರು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯಾರ್ಥಿನಿ ಚೇತರಿಸಿಕೊಂಡ ಬಳಿಕ ನಡೆದ ಘಟನೆ ಹೇಳಿದ್ದಾಳೆ. ಆರೋಪಿ ಅತಿಥಿ ಶಿಕ್ಷಕ ಶಿವರಾಜ ಹಣಮಂತನನ್ನು ಮಾದನಹಿಪ್ಪರಗಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು ಅದಕ್ಕೆ ಕಳಂಕ ತರುವ ಇಂತಹ ಕಾಮಾಂಧರಿಂದ ನಾಗರೀಕ ಸಮಾಜ ತಲೆ ತಗ್ಗಿಸಬೇಕಾಗಿದೆ.