ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ(Devara Hipparagi): ತಾಲೂಕಿನ ಕೊಂಡಗೂಳಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಹಾಗೂ ಶ್ರೀ ಕೇಶಿರಾಜ ಪ್ರೌಢಶಾಲೆಯಲ್ಲಿ 1986 ರಿಂದ 1997 ನೇ ಸಾಲಿನ ಓದಿದ ವಿದ್ಯಾರ್ಥಿಗಳಿಂದ ಗುರು ವಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವೇದಮೂರ್ತಿ ಬಸವಲಿಂಗಯ್ಯ ಗದ್ಗಿಮಠ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಕ್ಷೇತ್ರ ಶಿಕ್ಷ್ಷಣಾಧಿಕಾರಿ ಎಸ್.ಎಮ್. ನಾಗಾವಿ ವಹಿಸಿದ್ದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್.ಎನ್.ಬಸವರೆಡ್ಡಿ, ಶಿಕ್ಷಕರಾದ ಎಸ್.ಎಂ.ಪೊಲೀಸ್ ಪಾಟೀಲ, ಎಂ.ಬಿ.ಹೆರಕಲ್, ಬಿ.ಬಿ.ಬಾಗೇವಾಡಿ, ಎಂ.ಎಸ್.ಅವರಾದಿ, ಎಚ್.ಕೆ.ಉಸ್ತಾದ, ಎಂ.ಎಂ.ದಂಡೋತಿ, ಎಸ್.ಎನ್.ಸೊನ್ನದ, ಡಿ.ಟಿ.ದಾಸರ, ಎಸ್.ಎಸ್.ಸಾತಿಹಾಳ, ಬಿ.ಆರ್.ಮಳ್ಳಿ, ಎ.ಎಸ್.ಬಸವಣ್ಣನವರ, ಎ.ಎಸ್.ಭೀಮನಗರ, ಮುಖ್ಯಗುರುಮಾತೆ ಬಿ.ಬಿ.ಅಗ್ನಿ, ಎಸ್.ಎ.ಬಿರಾದಾರ, ಸಂಪತ್ ರಡ್ಡಿ, ಬಿ.ಕೆಂಭಾವಿ, ಬಸವರಾಜ ಖೈನೂರ ಅವರನ್ನು ಸನ್ಮಾನಿಸಲಾಯಿತು.
ಸಿಂದಗಿ: ರಸ್ತೆಗಾಗಿ ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ಪ್ರತಿಭಟನೆ ವರದಿ ಇಲ್ಲಿದೆ…
ಪ್ರಾಥಮಿಕ ಶಾಲೆಯಲ್ಲಿ 50 ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು. ಹಳೆಯ ವಿದ್ಯಾರ್ಥಿನಿ ಮಲ್ಲಮ್ಮ ಗುನ್ನಾಪುರ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಿದ್ದು ರೆಡ್ಡಿ ದೇಸಾಯಿ ಸ್ವಾಗತಿಸಿದರು. ಕವಿತಾ ಕುಲಕರ್ಣಿ ನಿರೂಪಿಸಿದರು. ಶಿವಲಿಂಗ ದಂಡೋತಿ ವಂದಿಸಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಸಂಪತ್ ರೆಡ್ಡಿ, ಮೆಹಬೂಬ ಖಾಜಿ, ಶ್ರೀಶೈಲ ಡಂಬಳ, ಚಂದ್ರಕಾಂತ ಸೊನ್ನದ, ಪ್ರಕಾಶ ಕೊಂಡಗೂಳಿ, ಭೀಮರಾಯ ನಂದೆಳ್ಳಿ, ಚಂದ್ರಕಾಂತ ವಾಲಿ, ಪರಮಾನಂದ ಸಿಂದಗಿ, ನಾಗು ದೇಸಾಯಿ, ಬಸವರಾಜ ಖೈನೂರ, ಶಿವು ಸಾತಿಹಾಳ, ಅಕ್ಕಮಹಾದೇವಿ ಹಿಪ್ಪರಗಿ, ನೀಲಮ್ಮ ಬಿರಾದಾರ, ಚನ್ನಪ್ಪ ಪೂಜಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.