ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕನ್ನಡ ಚಿತ್ರರಂಗದ ನಿರ್ದೇಶಕ ಗುರುಪ್ರಸಾದ್ ಅವರ ಕೊನೆಯ ಸಿನಿಮಾ ಎದ್ದೇಳು ಮಂಜುನಾಥ-2 ಶುಕ್ರವಾರ ಬಿಡುಗಡೆಯಾಗಬೇಕಿದೆ. ಆದರೆ, ಅವರ 2ನೇ ಪತ್ನಿ ಸುಮಿತ್ರಾ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ದಿವಂಗತ ಗುರುಪ್ರಸಾದ್ ಅವರ ನಿರ್ದೇಶನದ ಕೊನೆಯ ಚಿತ್ರ ಫೆಬ್ರವರಿ 21ರಂದು ರಿಲೀಸ್ ಆಗುವುದು ಅನುಮಾನ. ಇದರ ನಡುವೆ ಸಾವಿಗೂ ಮುನ್ನ 2ನೇ ಪತ್ನಿಯೊಂದಿಗೆ ಗುರುಪ್ರಸಾದ್ ಮಾಡಿಕೊಂಡಿರುವ ಜಗಳದ ಆಡಿಯೋ ವೈರಲ್ ಆಗಿದೆ. ನಾನು ಒಂದು ರೂಪಾಯಿಗೂ ಒದ್ದಾಡ್ತಿದೀನಿ. ನನ್ನ ಆರೋಗ್ಯ ಕೂಡ ಚೆನ್ನಾಗಿಲ್ಲ. ಬ್ಯುಸಿನೆಸ್ ಮಾಡಿ ಹಣ ಬಂದ ಮೇಲೆ ಮಗುಗೆ, ನಿನಗೆ ಏನಾದ್ರು ಮಾಡಿಟ್ಟು ಸಾಯ್ತೀನಿ ಎಂದಿರುವ ಆಡಿಯೋ ವೈರಲ್ ಆಗಿದೆ.
ಇನ್ನು ಎದ್ದೇಳು ಮಂಜುನಾಥ-2 ಚಿತ್ರದ ನಿರ್ಮಾಪಕರಾದ ರವಿ ದೀಕ್ಷಿತ್, ಮೈಸೂರು ರಮೇಶ್ ಸಹ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಗುರುಪ್ರಸಾದ್ ಸಾಯುವ ಮೊದಲು ಸಿನಿಮಾದ ಪುಟೇಜ್ ಡಿಲೀಟ್ ಮಾಡಿದ್ದರು. ಅದನ್ನು ತುಂಬ ಕಷ್ಟಪಟ್ಟು ರಿಕವರಿ ಮಾಡಿದ್ದೇವೆ. ಈ ಕುರಿತು ವಾಣಿಜ್ಯ ಮಂಡಳಿಯಲ್ಲಿ ಚರ್ಚೆಯಾಗಿದೆ. ಸಿನಿಮಾದ ಲಾಭದಲ್ಲಿ ಶೇಕಡ 51ರಷ್ಟು 2ನೇ ಸುಮಿತ್ರಾಗೆ ಕೊಡುವ ಬಗ್ಗೆ ನಿರ್ಧಾರಕ್ಕೆ ಬರಲಾಗಿತ್ತು. ಹಣದ ಸಲುವಾಗಿ ಈಗ ಸ್ಟೇ ತಂದಿದ್ದಾರೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ. ಹೀಗಾಗಿ ಎದ್ದೇಳು ಮಂಜುನಾಥ್-2 ಚಿತ್ರ ಶುಕ್ರವಾರ ಬಿಡುಗಡೆಯಾಗುತ್ತಾ ಇಲ್ಲವಾ ಅನ್ನೋ ಕುತೂಹಲವಿದೆ.